ಇಸ್ಕಾನ್ ವ್ಯಾಲ್ಯೂ ಎಜುಕೇಶನ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಉಡುಪಿಯ ಗ್ಯಾನ್ ಜಿ ಪಾಲನ್‌ಗೆ ಪ್ರಥಮ ರ‍್ಯಾಂಕ್
ಉಡುಪಿಯ ಪ್ರತಿಭಾವಂತ ವಿದ್ಯಾರ್ಥಿ ಗ್ಯಾನ್ ಜಿ ಪಾಲನ್ ಅವರು “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಉಡುಪಿ: ಉಡುಪಿಯ ಪ್ರತಿಭಾವಂತ ವಿದ್ಯಾರ್ಥಿ ಗ್ಯಾನ್ ಜಿ ಪಾಲನ್ ಅವರು “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಉಡುಪಿಯ ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗ್ಯಾನ್ ಜಿ ಪಾಲನ್, ಭಾರತದಾದ್ಯಂತ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ವಿವಿಧ ರಾಜ್ಯಗಳಿಂದ ಕೇವಲ 120 ವಿದ್ಯಾರ್ಥಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು, ಅವರಲ್ಲಿ ಕೊಡವೂರು ಬಾಚನಬೈಲು ನಿವಾಸಿಗಳಾದ ಗಣೇಶ್ ಹಾಗೂ ಅಂಬಾ ಜಿ ಪಾಲನ್ ದಂಪತಿಯ ಪುತ್ರ ಗ್ಯಾನ್ ಜಿ ಪಾಲನ್ ಅವರು ವ್ಯಾಲ್ಯೂ ಎಜುಕೇಶನ್ ವಿಭಾಗದಲ್ಲಿ ಮೊದಲ ರ‍್ಯಾಂಕ್ ಗಳಿಸಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಾಧನೆಗಾಗಿ ಬೆಂಗಳೂರಿನ ಶೇಷಾದ್ರಿಯಲ್ಲಿರುವ ಇಸ್ಕಾನ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮಂಗಳಯಾನ ಯೋಜನೆಯ ರೂವಾರಿಗಳಲ್ಲಿ ಒಬ್ಬರು ಹಾಗೂ ಇಸ್ರೋದ ಮಾಜಿ ಅಧ್ಯಕ್ಷರಾದ S. Somanath ಅವರು ಗ್ಯಾನ್ ಜಿ ಪಾಲನ್ ಅವರಿಗೆ ಪ್ರಶಸ್ತಿ ಪತ್ರ, ಸೈಕಲ್ ಹಾಗೂ ಇಸ್ರೋ ಭೇಟಿ ನೀಡುವ ವಿಶೇಷ ಅವಕಾಶವನ್ನು ನೀಡಿ ಸನ್ಮಾನಿಸಿದರು.
ಗ್ಯಾನ್ ಜಿ ಪಾಲನ್ ಅವರ ಈ ಅಪೂರ್ವ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಬಂಧು-ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
