ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಯಶವಂತ್ ಸುವರ್ಣ ಆಯ್ಕೆ
ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಯಶವಂತ್ ಸುವರ್ಣ ಆಯ್ಕೆಯಾಗಿದ್ದಾರೆ.

ಉಡುಪಿ, ಜು. 17: ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಯಶವಂತ್ ಸುವರ್ಣ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ವಾಲಿಬಾಲ್ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಪ್ರತಿಭಾವಂತ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಸ್ಥಾಪನೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಾಲಿಬಾಲ್ ಕ್ರೀಡೆಯ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಸಾಧನೆಗೆ ಸಂಘವು ಸಕ್ರಿಯವಾಗಿ ಸಹಕರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಸೋಸಿಯೇಷನ್‌ನ ಗೌರವಾಧ್ಯಕ್ಷರಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಪಾಧ್ಯಕ್ಷರಾಗಿ ರಾಹುಲ್ ಡಿ. ಶೆಟ್ಟಿ, ಕಾರ್ಯದರ್ಶಿಯಾಗಿ ಮಂಜುನಾಥ್ ಪಾಟ್ಕರ್, ಜೊತೆ ಕಾರ್ಯದರ್ಶಿಗಳಾಗಿ ಸ್ಟೀಫನ್ ಎಸ್. ಪಿಂಟೋ ಹಾಗೂ ಸಚಿನ್ ಸುವರ್ಣ, ಖಜಾಂಚಿಯಾಗಿ ಸಚಿನ್ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಪದಾಧಿಕಾರಿಗಳಾಗಿ ಪ್ರತೀಕ್ಷಾ ಕೆ., ಕೌಶಲ್ಯ ಬಂಗೇರ, ಅಕ್ಷಯ ಶೆಟ್ಟಿ, ಸುಮನ್ ಕುಮಾರ್, ಸಚಿನ್ ಪೂಜಾರಿ ಹಾಗೂ ಜಾಯ್ ಸಂದೀಪ್ ಗೊನ್ಸಾಲ್ವಿಸ್ ಆಯ್ಕೆಯಾಗಿದ್ದು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ತಿಕ್, ಭಾಸ್ಕರ್, ಪ್ರಜ್ಞಾ ಜನಾರ್ದನ ಕೊಡವೂರು, ಸುಶಾಂತ್, ಸತ್ಯ ಕುಮಾರ್ ಹಾಗೂ ವಿನಯ್ ಶೇಟ್ ನೇಮಕಗೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
