Skip to content
Billava News

ಬಿಲ್ಲವರ ಅಸೋಸಿಯೇಷನ್ ಮುಂಬೈ ದೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಸಮಾರಂಭ

ಮುಂಬೈ: ಬಿಲ್ಲವರ ಅಸೋಸಿಯೇಷನ್ ಮುಂಬೈ ದೊಂಬಿವಲಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆಯು ಹಲವಾರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ 30ರಂದು ವಿಜೃಂಭಣೆಯಿಂದ ಜರುಗಿತು.

By Billavavani
ಬಿಲ್ಲವರ ಅಸೋಸಿಯೇಷನ್ ಮುಂಬೈ ದೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಸಮಾರಂಭ

ಮುಂಬೈ: ಬಿಲ್ಲವರ ಅಸೋಸಿಯೇಷನ್ ಮುಂಬೈ ದೊಂಬಿವಲಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆಯು ಹಲವಾರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ 30ರಂದು ವಿಜೃಂಭಣೆಯಿಂದ ಜರುಗಿತು.

Screenshot 2026-09-01 120552.png

ಅರ್ಚಕರಾದ ಈಶ್ವರ್ ಕೋಟ್ಯಾನ್ ಮತ್ತು ಅಣ್ಣು ಪೂಜಾರಿಯವರ ಪೌರೋಹಿತ್ಯದಲ್ಲಿ ಕಳಸ ಪ್ರತಿಷ್ಠೆಯಾದ ನಂತರ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಮತ್ತು ಉಪಾಧ್ಯಕ್ಷರಾದ ಪುರುಷೋತ್ತಮ ಕೋಟ್ಯಾನ್ ಹಾಗೂ ಗೌ| ಪ್ರ| ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಹಾಗೂ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಧರ ಬಿ. ಅಮೀನ್ ಮತ್ತು ಎಲ್ಲಾ ಪದಾಧಿಕಾರಿಗಳಿಂದ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Screenshot 2026-09-01 120651.png

ತದನಂತರ ಸ್ಥಳೀಯ ಸಮಿತಿಯ ಭಜನಾ ಮಂಡಳಿ ಮತ್ತು ಯಶಸ್ವಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮಗಳು ಜರುಗಿದವು. ನಂತರ ಪುಟಾಣಿಗಳಿಂದ, ಯುವತಿಯರಿಂದ ಹಾಗೂ ಮಹಿಳಾ ವಿಭಾಗದವರಿಂದ ಕುಣಿತ ಭಜನೆ ಕಾರ್ಯಕ್ರಮ ಜರುಗಿತು.

WhatsApp Image 2026-09-01 at 9.31.56 AM (2).jpegWhatsApp Image 2026-09-01 at 9.31.56 AM (3).jpeg

ಈ ಸುಸಂದರ್ಭದಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತೆ (ಭಾಗ-1)’ ಪವಿತ್ರ ಗ್ರಂಥವನ್ನು ಹಿರಿಯರಾದ ಗಿರಿಜಾ ಸಂಜೀವ ಪಾಲನ್‌ರವರ ದಿವ್ಯ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಷನ್ ಇದರ ಗೌ| ಪ್ರ| ಕೋಶಾಧಿಕಾರಿ ರವಿ ಎಸ್. ಸನಿಲ್‌ರವರು ಉಪಸ್ಥಿತರಿದ್ದರು.

Screenshot 2026-09-01 120621.png

ತದನಂತರ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಗೌರವಾಧ್ಯಕ್ಷರಾದ ಎಲ್. ವಿ. ಅಮೀನ್‌ರವರ ಉಪಸ್ಥಿತಿಯಲ್ಲಿ, ದೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸಮಾಜ ಸೇವಕ, ಪ್ರಸ್ತುತ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಗೌ| ಕೋಶಾಧಿಕಾರಿಯವರಾದ ಶ್ರೀಯುತ ರವಿ ಎಸ್. ಸನಿಲ್ ಮತ್ತು ಅವರ ಧರ್ಮಪತ್ನಿಯವರಾದ ಕುಶ ಸನಿಲ್‌ರವರನ್ನು ಸ್ಥಳೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

Screenshot 2026-09-01 113027.png

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀಧರ ಬಿ. ಅಮೀನ್, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ ಎಸ್. ಪಾಲನ್, ಸಚಿನ್ ಜಿ. ಪೂಜಾರಿ, ಗೌ| ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿ, ಕೋಶಾಧಿಕಾರಿ ಆನಂದ ಪೂಜಾರಿ ಮತ್ತು ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದವರು ಹಾಗೂ ಯುವ ವಿಭಾಗದವರು ಉಪಸ್ಥಿತರಿದ್ದರು.

ಮಹಾ ಮಂಗಳಾರತಿಯಾದ ನಂತರ ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ಸೇವೆ ಜರುಗಿತು. ಗೌ| ಕಾರ್ಯದರ್ಶಿ ಜೆ. ಜೆ. ಕೋಟ್ಯಾನ್‌ರವರು ಸ್ವಾಗತಿಸಿ, ಗುರು ಪ್ರಾರ್ಥನೆ ಮಾಡಿ ಕಾರ್ಯಕ್ರಮ ನಿರೂಪಿಸಿದರು.

Screenshot 2026-09-01 120632.pngScreenshot 2026-09-01 120718.pngScreenshot 2026-09-01 120659.png

Screenshot 2026-09-01 120704.png