Skip to content
Billava News

ಅಂಧೇರಿಯಲ್ಲಿ ಸೆ. 20ರಂದು ಭಾನುವಾರ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಮುಂಬೈ, ಸೆ. 16: ಅಂಧೇರಿ ಪೂರ್ವದಲ್ಲಿ ಶ್ರೀ ನಾರಾಯಣ ಗುರು ಭಜನಾ ಮಂಡಲದ ಉದ್ಘಾಟನೆ ಹಾಗೂ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಸೆ. 20ರಂದು ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

By Billavavani

ಅಂಧೇರಿ ಪೂರ್ವದ ಶೇರ್-ಎ-ಪಂಜಾಬ್ ಸೊಸೈಟಿ, ಮಹಾಕಾಳಿ ಕೇವ್ಸ್ ರಸ್ತೆಯಲ್ಲಿರುವ ಸೇಂಟ್ ಡೊಮಿನಿಕ್ ಸವಿಯೋ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

q11.jpeg

ಮಧ್ಯಾಹ್ನ 3.30ಕ್ಕೆ ಬಾಪ್ಟಿಸ್ಟಾವಾಡಿಯ ಶ್ರೀ ಕ್ಷೇತ್ರ ದತ್ತ ಜಗದಂಬಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಗುವುದು. ಬಳಿಕ ‘ಒಯ್ಕ್ಲ ದಿನ ಬರೋಡ್’ ಎಂಬ ತುಳು ನಾಟಕ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ.

ರಾತ್ರಿ 8 ಗಂಟೆಗೆ ಗುರು ಪ್ರಸಾದ ಹಾಗೂ ಅನ್ನಸಂತರ್ಪಣೆ (ಮಹಾಪ್ರಸಾದ) ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಕ್ತರು, ಸಮಾಜ ಬಾಂಧವರು ಹಾಗೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಅಂಧೇರಿ ಪೂರ್ವದಿಂದ ಕಾರ್ಯಕ್ರಮದ ಸ್ಥಳಕ್ಕೆ BEST ಬಸ್‌ನ 339 ಹಾಗೂ 392 ಸಂಖ್ಯೆಯ ಬಸ್‌ಗಳ ಸೌಲಭ್ಯವಿದೆ.

ಕಾರ್ಯಕ್ರಮಕ್ಕೆ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಆಗಮಿಸಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಪಡೆದು, ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.