Skip to content
Billava News

ಪಡುಬಿದ್ರಿಯಲ್ಲಿ ನಾರಾಯಣ ಗುರುಗಳ 97ನೇ ಪುಣ್ಯತಿಥಿ ಪ್ರಯುಕ್ತ ವಿಚಾರ ಮಂಡನೆ

ಪಡುಬಿದ್ರಿ: ಬ್ರಹ್ಮಶ್ರೀ ನಾರಾಯಣ ಗುರುಗಳ 97ನೇ ಪುಣ್ಯತಿಥಿಯ ಪ್ರಯುಕ್ತ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ‘ತುಳುನಾಡ್ ಬೆರ್ಮೆರ್ ಬೊಕ್ಕ ಹಿರಿಯಾಕ್ಲಿನ ಆರಾಧನೆ’ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮ ಸೋಮವಾರ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆಯಿತು.

By Billavavani
ಪಡುಬಿದ್ರಿಯಲ್ಲಿ ನಾರಾಯಣ ಗುರುಗಳ 97ನೇ ಪುಣ್ಯತಿಥಿ ಪ್ರಯುಕ್ತ ವಿಚಾರ ಮಂಡನೆ

ಪಡುಬಿದ್ರಿ: ಬ್ರಹ್ಮಶ್ರೀ ನಾರಾಯಣ ಗುರುಗಳ 97ನೇ ಪುಣ್ಯತಿಥಿಯ ಪ್ರಯುಕ್ತ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ‘ತುಳುನಾಡ್ ಬೆರ್ಮೆರ್ ಬೊಕ್ಕ ಹಿರಿಯಾಕ್ಲಿನ ಆರಾಧನೆ’ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮ ಸೋಮವಾರ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆಯಿತು.

WhatsApp Image 2026-09-22 at 4.22.44 PM.jpeg

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಪರಿಪೂರ್ಣತೆಯನ್ನು ಸಾಧಿಸಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಸಂತರು ಹಾಗೂ ಹಿರಿಯರ ಮಾರ್ಗದರ್ಶನದ ಹಾದಿಯಲ್ಲಿ ನಡೆಯುವುದು ಬಹುಮುಖ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳನ್ನು ತಾಂಬೂಲ ನೀಡಿ ಗೌರವಿಸಲಾಯಿತು.

WhatsApp Image 2026-09-22 at 4.22.47 PM.jpeg

ಯುವ ಚಿಂತಕ ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ ಮಾತನಾಡಿ, ಹಿಂದಿನ ಕಾಲದಲ್ಲಿ ಇಂದಿನ ರೀತಿಯ ಜಾತಿ ಪದ್ಧತಿ ಇರಲಿಲ್ಲ. ತುಳು ಸಂಸ್ಕೃತಿಯಲ್ಲಿ ವಿವಿಧ ಪದ್ಧತಿಗಳು ಹಾಗೂ ಆಚರಣೆಗಳು ತಮ್ಮದೇ ಆದ ಮಹತ್ವವನ್ನು ಹೊಂದಿದ್ದವು. ಕುಟುಂಬವನ್ನು ದೈವಗಳು ಕಾಪಾಡುತ್ತಿವೆ ಎಂಬ ನಂಬಿಕೆ ಹಾಗೂ ಭಾವನೆಯೊಂದಿಗೆ ದೈವಾರಾಧನೆ, ಭೂತಾರಾಧನೆ ನಡೆದುಕೊಂಡು ಬಂದಿದೆ ಎಂದರು. ಮನುಷ್ಯ ಜನ್ಮಕ್ಕೆ ಏಳು ವರ್ಷಗಳ ಅನುಬಂಧವಿದೆ ಎಂಬ ನಂಬಿಕೆ ಸುಳ್ಳು ಎಂದು ಅವರು ಅಭಿಪ್ರಾಯಪಟ್ಟರು.

WhatsApp Image 2026-09-22 at 4.22.46 PM.jpeg

ತುಳು ಜನಪದ ಆಸಕ್ತ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಅವರು ‘ತುಳುನಾಡ್ ಬೆರ್ಮೆರ್ ಬೊಕ್ಕ ಹಿರಿಯಾಕ್ಲಿನ ಆರಾಧನೆ’ ಕುರಿತು ವಿಚಾರ ಮಂಡಿಸಿದರು. ತುಳುನಾಡಿನಲ್ಲಿ ಬೆರ್ಮೆರ್ ದೈವವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿ ಆರಾಧಿಸಲಾಗುತ್ತದೆ. ನಮ್ಮ ಕಾರ್ಯಗಳು ಸುಸೂತ್ರವಾಗಿ ನಡೆಯಲು ಬೆರ್ಮೆರ್ ದೈವವೇ ಮೂಲ ಕಾರಣ ಎಂಬ ನಂಬಿಕೆ ತುಳುನಾಡಿನ ಜನಪದ ಆಚರಣೆಗಳಲ್ಲಿ ಕಂಡುಬರುತ್ತದೆ ಎಂದು ವಿವರಿಸಿದರು.

WhatsApp Image 2026-09-22 at 4.22.46 PM (1).jpeg

ಹಿರಿಯಾಕ್ಲಿನ ಆರಾಧನೆ ಕುರಿತು ಮಾತನಾಡಿದ ಅವರು, ತ್ರಿಕಾಲ ಜ್ಞಾನಿಗಳು, ತಮ್ಮ ಸುಖ-ಸಂತೋಷಗಳನ್ನು ತ್ಯಾಗ ಮಾಡಿ ಇತರರ ಉದ್ಧಾರಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಸಂತರು ಹಾಗೂ ಮನುಕುಲವನ್ನು ಒಂದುಗೂಡಿಸುವ ಸಂದೇಶ ಸಾರುತ್ತಾ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರನ್ನು ನಮ್ಮ ಹಿರಿಯರು ಆರಾಧಿಸುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷ ನಿಖಿಲ್ ಪೂಜಾರಿ, ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅರ್ಚಕ ಶ್ರೀ ಚಂದ್ರಶೇಖರ ಶಾಂತಿ, ಕಾರ್ಯದರ್ಶಿ ಶ್ರೀ ಲಕ್ಷ್ಮಣ್ ಡಿ. ಪೂಜಾರಿ, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕಿ ಚೈತ್ರಾ ಮನೋಹರ್ ಸೇರಿದಂತೆ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಯುವವಾಹಿನಿ ಘಟಕದ ಸರ್ವ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.

ಬಿಲ್ಲವ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ರವಿರಾಜ್ ಕೋಟ್ಯಾನ್ ಹಾಗೂ ಹರೀಶ್ ಕೋಟ್ಯಾನ್ ಉಳ್ಳೂರು ನಿರೂಪಿಸಿದರು. ಚೈತ್ರಾ ಮನೋಹರ್ ಧನ್ಯವಾದ ಸಮರ್ಪಿಸಿದರು.

WhatsApp Image 2026-09-22 at 4.22.44 PM (1).jpegWhatsApp Image 2026-09-22 at 4.22.45 PM.jpeg