Skip to content
Billava News

ಕೊಲ್ಯ: ಭರತನಾಟ್ಯದ ಸಿಹಿಹೂರಣ, ಯಕ್ಷಗಾನದ ರಸದೌತಣ, ಕೊಲ್ಯ ಸೋಮೇಶ್ವರದಲ್ಲಿ ಮನಸೂರೆಗೊಂಡ ‘ಸಾಂಸ್ಕೃತಿಕ ಸಂಜೆ’

ಕೊಲ್ಯ: ರೋಟರಿ ಸಮುದಾಯ ದಳ ಕೊಲ್ಯ–ಸೋಮೇಶ್ವರದ ಆಶ್ರಯದಲ್ಲಿ ಹಾಗೂ ರೋಟರಿ ಕ್ಲಬ್ ಮಂಗಳೂರು ಪೂರ್ವ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ, ಯುವವಾಹಿನಿ (ರಿ.) ಕೊಲ್ಯ ಘಟಕ ಮತ್ತು ಜರ್ನಿ ಥಿಯೇಟರ್ ಮಂಗಳೂರು ಇವರ ಸಹಯೋಗದಲ್ಲಿ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮವು...

By Billavavani
ಕೊಲ್ಯ: ಭರತನಾಟ್ಯದ ಸಿಹಿಹೂರಣ, ಯಕ್ಷಗಾನದ ರಸದೌತಣ, ಕೊಲ್ಯ ಸೋಮೇಶ್ವರದಲ್ಲಿ ಮನಸೂರೆಗೊಂಡ ‘ಸಾಂಸ್ಕೃತಿಕ ಸಂಜೆ’

ಕೊಲ್ಯ: ರೋಟರಿ ಸಮುದಾಯ ದಳ ಕೊಲ್ಯ–ಸೋಮೇಶ್ವರದ ಆಶ್ರಯದಲ್ಲಿ ಹಾಗೂ ರೋಟರಿ ಕ್ಲಬ್ ಮಂಗಳೂರು ಪೂರ್ವ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ, ಯುವವಾಹಿನಿ (ರಿ.) ಕೊಲ್ಯ ಘಟಕ ಮತ್ತು ಜರ್ನಿ ಥಿಯೇಟರ್ ಮಂಗಳೂರು ಇವರ ಸಹಯೋಗದಲ್ಲಿ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮವು ಆ.29ರಂದು ಕೊಲ್ಯ ಶ್ರೀ ನಾರಾಯಣಗುರು ಮಂದಿರದ ಸಭಾಂಗಣದಲ್ಲಿ ವೈಭವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ, ಪ್ರತಿಭಾ ಪುರಸ್ಕಾರ, ರೋಟರಿ ಸಮುದಾಯ ಪುರಸ್ಕಾರ ಹಾಗೂ ಯಕ್ಷಗಾನ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನರಂಜಿಸಿದವು.

WhatsApp Image 2026-08-30 at 2.57.51 PM.jpeg

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಶಾಂತಲಾ ನಾಟ್ಯ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

WhatsApp Image 2026-08-30 at 2.57.56 PM.jpeg

ಬಳಿಕ ಮಂಗಳೂರಿನ ನಾದ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಆ್ಯಂಡ್ ಕಲ್ಚರಲ್ ಟ್ರಸ್ಟ್‌ನ ಡಾ. ಭ್ರಮರಿ ಶಿವಪ್ರಕಾಶ್ ಅವರ ನಿರ್ದೇಶನದಲ್ಲಿ ಕುಮಾರಿ ಚಿನ್ಮಯಿ ಕೋಟ್ಯಾನ್ ಅವರು ಭರತನಾಟ್ಯ ಪ್ರದರ್ಶಿಸಿದರು. ನೃತ್ಯದ ವಿವಿಧ ಭಾವಾಭಿನಯ, ಲಯ ಮತ್ತು ನೃತ್ಯ ಸಂಯೋಜನೆಗಳಿಂದ ಪ್ರೇಕ್ಷಕರ ಗಮನ ಸೆಳೆದ ಚಿನ್ಮಯಿ ಅವರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

WhatsApp Image 2026-08-30 at 2.57.56 PM (1).jpegWhatsApp Image 2026-08-30 at 2.57.54 PM.jpeg

ಪ್ರತಿಭೆಗೆ ಗೌರವ

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಂಗಳೂರು ಪೂರ್ವದ ಮಾಜಿ ಅಧ್ಯಕ್ಷ ರೊ. ಆನಂದ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿ, ಭರತನಾಟ್ಯ ಕಲಾವಿದೆ ಚಿನ್ಮಯಿ ಕೋಟ್ಯಾನ್ ಅವರ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಂಗಳೂರು ಪೂರ್ವದ ಕಾರ್ಯದರ್ಶಿ ರೊ. ಪ್ರಮೋದ್ ಪ್ರಭು, ಆರ್‌ಸಿಸಿ ಚೇರ್ಮನ್ ರೊ. ಗೋಪಾಲ ಶೆಟ್ಟಿ, ವೈಸ್ ಚೇರ್ಮನ್ ರೊ. ಜೈಕುಮಾರ್ ಪರ್ಯತ್ತೂರು, ರೋಟರಿ ಸಮುದಾಯ ದಳ ಕೊಲ್ಯ–ಸೋಮೇಶ್ವರದ ಅಧ್ಯಕ್ಷ ಸೀತಾರಾಮ ಕರ್ಕೇರ, ಕಾರ್ಯದರ್ಶಿ ಜಯದೇವ್, ಆರ್‌ಸಿಸಿ ಜಿಲ್ಲಾ ಪ್ರತಿನಿಧಿ ಆನಂದ್ ಎಂ. ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕಾಸಿಂಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರ್ಷಂಪ್ರತಿ ನೀಡಲಾಗುವ ರೋಟರಿ ಸಮುದಾಯ ಪುರಸ್ಕಾರವನ್ನು ಗಣನೀಯ ಸೇವೆ ಸಲ್ಲಿಸಿದ ಶ್ರೀ ರಕ್ಷಿತ್ ಕುಮಾರ್ ಜೆ. ಹಾಗೂ ಡಾ. ಅನ್ವಿತಾ ಎ. (ಪಿಟಿ) ಅವರಿಗೆ ಪ್ರದಾನ ಮಾಡಲಾಯಿತು.

ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಕುಮಾರಿ ತನ್ವಿ ಕೆ.ಎಂ., ಕುಮಾರಿ ಸಾನ್ವಿ ಕೆ.ಜೆ., ಕುಮಾರಿ ಉನ್ನತಿ ಎಸ್. ಹಾಗೂ ಅಮಿತ್ ಎಸ್. ಅವರಿಗೆ ರೋಟರಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

‘ರಾಮಾಂಜನೇಯ ಕಾಳಗ’ಕ್ಕೆ ಪ್ರೇಕ್ಷಕರ ಮೆಚ್ಚುಗೆ

ಕಾರ್ಯಕ್ರಮದ ಕೊನೆಯಲ್ಲಿ ಮಂಗಳೂರಿನ ಜರ್ನಿ ಥಿಯೇಟರ್ ತಂಡದ ಕಲಾವಿದರಿಂದ, ಶ್ರೀ ಸುನಿಲ್ ಪಲ್ಲಮಜಲು ಅವರ ನಿರ್ದೇಶನದಲ್ಲಿ ‘ರಾಮಾಂಜನೇಯ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಿತು.

WhatsApp Image 2026-08-30 at 2.57.55 PM (1).jpeg

ಸಾಂಪ್ರದಾಯಿಕ ಯಕ್ಷಗಾನದ ಸೊಗಡಿನೊಂದಿಗೆ ವಿಶೇಷ ರೀತಿಯಲ್ಲಿ ಮೂಡಿಬಂದ ‘ರಾಮಾಂಜನೇಯ ಕಾಳಗ’ ಯಕ್ಷಗಾನವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಭರತನಾಟ್ಯದ ಸೊಬಗು ಹಾಗೂ ಯಕ್ಷಗಾನದ ರಸದೌತಣದೊಂದಿಗೆ ನಡೆದ ‘ಸಾಂಸ್ಕೃತಿಕ ಸಂಜೆ’ ಕಲಾಸಕ್ತರಿಗೆ ಅವಿಸ್ಮರಣೀಯ ಅನುಭವ ನೀಡಿತು.

ರೋಟರಿ ಸಮುದಾಯ ದಳದ ಜತೆ ಕಾರ್ಯದರ್ಶಿ ಶ್ರೀ ಕುಸುಮಾಕರ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

WhatsApp Image 2026-08-30 at 2.57.55 PM.jpegWhatsApp Image 2026-08-30 at 2.57.55 PM (2).jpeg