Skip to content
Billava News

ಗೋವಿಂದ ಬಾಬು ಪೂಜಾರಿ ಅವರ Chef Talk ಸಂಸ್ಥೆ AFSTI ವಿಜ್ಞಾನಿಗಳ ತಂಡ ಭೇಟಿ; ಸ್ವಚ್ಛತೆ, ಗುಣಮಟ್ಟ ಮೆಚ್ಚುಗೆ

ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘ (AFSTI), ಬೆಂಗಳೂರು ಚಾಪ್ಟರ್‌ನ ಸುಮಾರು 15 ಮಂದಿ ವಿಜ್ಞಾನಿಗಳ ತಂಡವು ಇಂದು ಬೊಮ್ಮನಹಳ್ಳಿ ಕೇಂದ್ರ Cheftalk ಉಪಹಾರ ಅಡುಗೆಮನೆಗೆ ಭೇಟಿ ನೀಡಿ…

By Billavavani
ಗೋವಿಂದ ಬಾಬು ಪೂಜಾರಿ ಅವರ Chef Talk ಸಂಸ್ಥೆ AFSTI ವಿಜ್ಞಾನಿಗಳ ತಂಡ ಭೇಟಿ; ಸ್ವಚ್ಛತೆ, ಗುಣಮಟ್ಟ ಮೆಚ್ಚುಗೆ

ಬೆಂಗಳೂರು, ಆಗಸ್ಟ್ 14: ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘ (AFSTI), ಬೆಂಗಳೂರು ಚಾಪ್ಟರ್‌ನ ಸುಮಾರು 15 ಮಂದಿ ವಿಜ್ಞಾನಿಗಳ ತಂಡವು ಇಂದು ಬೊಮ್ಮನಹಳ್ಳಿ ಕೇಂದ್ರ Cheftalk ಉಪಹಾರ ಅಡುಗೆಮನೆಗೆ ಭೇಟಿ ನೀಡಿ, ಅಲ್ಲಿನ ಆಹಾರ ಸುರಕ್ಷತಾ ಕ್ರಮಗಳು, ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳು ಹಾಗೂ ಸ್ವಚ್ಛತಾ ಮಾನದಂಡಗಳನ್ನು ಪರಿಶೀಲಿಸಿತು.

ಭೇಟಿಯ ವೇಳೆ ತಂಡವು ಆಹಾರ ತಯಾರಿಕೆ, ಸಂಗ್ರಹಣೆ ಹಾಗೂ ವಿತರಣಾ ಪ್ರಕ್ರಿಯೆಗಳನ್ನು ಅವಲೋಕಿಸಿ, ಕೇಂದ್ರದಲ್ಲಿ ಅನುಸರಿಸಲಾಗುತ್ತಿರುವ ಕಟ್ಟುನಿಟ್ಟಿನ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಅಲ್ಲದೆ, ಅಡುಗೆಮನೆಯ ಸ್ವಚ್ಛತೆ, ಗುಣಮಟ್ಟ ನಿರ್ವಹಣೆ ಹಾಗೂ ಕಾರ್ಯನಿರ್ವಹಣೆಯ ದಕ್ಷತೆಯನ್ನು ಶ್ಲಾಘಿಸಿತು.

IMG_3745.jpeg

AFSTI ಸದಸ್ಯರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಅಡುಗೆಮನೆ ಕೈಗೊಂಡಿರುವ ಕ್ರಮಗಳು ಮಾದರಿಯಾಗಿದ್ದು, ಇಂತಹ ವ್ಯವಸ್ಥೆಗಳು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

IMG_3746.jpeg

ಈ ಭೇಟಿ ಗೋವಿಂದ ಬಾಬು ಪೂಜಾರಿ ಅವರ Chef ಟಾಕ್ ಸಂಸ್ಥೆಯ ಕಾರ್ಯವೈಖರಿ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಕುರಿತು ವಿಜ್ಞಾನಿಗಳಿಗೆ ಸಮಗ್ರ ಮಾಹಿತಿ ನೀಡುವ ಜೊತೆಗೆ, ಉತ್ತಮ ಪದ್ಧತಿಗಳ ವಿನಿಮಯಕ್ಕೆ ಸಹಕಾರಿಯಾಯಿತು.

IMG_3747.jpeg