ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್–2026: ಸಮೃದ್ಧಿ ಸಿ. ಸುವರ್ಣಗೆ ಬೆಳ್ಳಿ, ಕಂಚಿನ ಪದಕ
ಮಂಗಳೂರು: ಇಂಟರ್‌ನ್ಯಾಷನಲ್ ಯಮಟೋ ಶೊಟೊಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ಆಲ್ ಇಂಡಿಯಾ ಓಪನ್...
By Billavavani

ಮಂಗಳೂರು: ಇಂಟರ್‌ನ್ಯಾಷನಲ್ ಯಮಟೋ ಶೊಟೊಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್–2026 ಇಂಡಿಪೆಂಡೆನ್ಸ್ ಕಪ್ ಶೊಟೊಕಾನ್ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಮಣಿಹಳ್ಳ ಓಂಟೆತಾರ್‌ನ ಸಮೃದ್ಧಿ ಸಿ. ಸುವರ್ಣ ಅವರು ಉತ್ತಮ ಸಾಧನೆ ಮಾಡಿದ್ದಾರೆ.
ಸ್ಪರ್ಧೆಯ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಸಮೃದ್ಧಿ ಅವರು ಮಣಿಹಳ್ಳ ಓಂಟೆತಾರ್‌ನ ಚಂದ್ರಹಾಸ ಮತ್ತು ಪ್ರಭೀತಾ ದಂಪತಿಯ ಪುತ್ರಿಯಾಗಿದ್ದು, ಬಂಟ್ವಾಳದ ಎಸ್‌ವಿಎಸ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ. ಅವರ ಸಾಧನೆಗೆ ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.
