ಕಾರ್ಕಳ: ಹಾಡಿ ಮೂಲ ಗರಡಿಯಲ್ಲಿ ವರ್ಷಾವಧಿ ಉತ್ಸವಕ್ಕೆ ಸಕಲ ಸಿದ್ಧತೆ
ಮೂಜೂರು ಹಿರ್ಗಾನ ಗ್ರಾಮದ ಹಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ–ಮಾಯಂದಾಲ ದೇವಿ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ವರ್ಷಾವಧಿ ಉತ್ಸವವು ಆಗಸ್ಟ್ 17ರಿಂದ 21ರವರೆಗೆ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.

ಮೂಜೂರು, ಆ.4: ಮೂಜೂರು ಹಿರ್ಗಾನ ಗ್ರಾಮದ ಹಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ–ಮಾಯಂದಾಲ ದೇವಿ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ವರ್ಷಾವಧಿ ಉತ್ಸವವು ಆಗಸ್ಟ್ 17ರಿಂದ 21ರವರೆಗೆ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.
ಆಗಸ್ಟ್ 17 (ಸೋಮವಾರ): ತೋರಣ ಮುಹೂರ್ತ, ಹಾಡಿ ಗರಡಿ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಆಗಮನ, ಪಂಚದೈವಗಳ ಸನ್ನಿಧಾನದಲ್ಲಿ ತನು ತಂಬಿಲ, ಪಂಚಪರ್ವ ಸೇವೆಗಳು, ಸೋಣಾರತಿ ದೀಪಾರಾಧನೆ, ಮಹಾಗಣಬಲಿ, ಮಹಾಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಆಗಸ್ಟ್ 18 (ಮಂಗಳವಾರ):ಕಲಶ ಪೂಜೆ, ಕ್ಷೇತ್ರ ಶುದ್ಧಿ, ಮಹಾಪೂಜೆ ಹಾಗೂ ಇತರ ವೈದಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ ನಾಗ ಬ್ರಹ್ಮರ ಬಲಿ ನಡೆಯಲಿದ್ದು, ರಾತ್ರಿ 8.30ಕ್ಕೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನೆರವೇರಲಿದೆ.

ಆಗಸ್ಟ್ 19 (ಬುಧವಾರ): ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಬೆಳಿಗ್ಗೆ 11 ಗಂಟೆಗೆ ಶ್ರೀ ಮಾಯಂದಾಲ ದೇವಿ ನೇಮೋತ್ಸವ ನಡೆಯಲಿದೆ.
ಆಗಸ್ಟ್ 20 (ಗುರುವಾರ): ಮಹಾಪೂಜೆ ಹಾಗೂ ವಾರ್ಷಿಕ ನೈವೇದ್ಯ ಪೂಜೆ (ಅಗೇಲು ಸೇವೆ) ನೆರವೇರಲಿದೆ.
ಆಗಸ್ಟ್ 21 (ಶುಕ್ರವಾರ): ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಮಂತ್ರಾಕ್ಷತೆ, ಗರಡಿಮನೆಗೆ ಭಂಡಾರ ನಿರ್ಗಮನ ಹಾಗೂ ಒಂದು ತಿಂಗಳ ಕಾಲ ನಡೆಯುವ ಸೋಣಾರತಿ ಪೂಜೆಗೆ ಚಾಲನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಉತ್ಸವ ಸಮಿತಿಯು ಭಕ್ತಾದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಿದೆ.
