ಪ್ರಾಧ್ಯಾಪಕಿ ಪ್ರೊ. ಶಿಲ್ಪಾ ಕೆ. ಅವರಿಗೆ ಪಿಎಚ್.ಡಿ. ಪದವಿ
ಮಂಗಳೂರು: ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್‌ನ ಬಿಬಿಎ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾ ಕೆ. ಅವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ.

ಮಂಗಳೂರು: ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್‌ನ ಬಿಬಿಎ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾ ಕೆ. ಅವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಪ್ರೊ. ಶಿಲ್ಪಾ ಕೆ. ಅವರು “Customer Satisfaction Towards Online Banking Services of Commercial Banks” (ವಾಣಿಜ್ಯ ಬ್ಯಾಂಕುಗಳ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳ ಕುರಿತು ಗ್ರಾಹಕರ ತೃಪ್ತಿ) ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಸಿ.ಕೆ. ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಅವರು ಸಂಶೋಧನೆ ನಡೆಸಿದ್ದು, ಡಾ. ಮುತ್ಯಾಲ ಸುಬ್ರಹ್ಮಣ್ಯಂ ಅವರು ಮೌಲ್ಯಮಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಡಾ. ಶಿಲ್ಪಾ ಕೆ. ಅವರು ಕುದ್ರೋಳಿಯ ಸುರೇಶ್ ಕೆ. ಹಾಗೂ ವಿಜಯಾ ಆರ್. ಕೆ. ದಂಪತಿಯ ಪುತ್ರಿ.