ಬೆಂಗಳೂರು ಬಿಲ್ಲವ ಅಸೋಸಿಯೇಷನ್ ವತಿಯಿಂದ ಸೇವಾದಳ ದಿನಾಚರಣೆ
ಮಂಗಳೂರು: ಬೆಂಗಳೂರಿನ ಬಿಲ್ಲವ ಅಸೋಸಿಯೇಷನ್ ವತಿಯಿಂದ ಸೇವಾದಳ ದಿನಾಚರಣೆಯನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲ್ಲವ ಭವನದಲ್ಲಿ ಆಚರಿಸಲಾಯಿತು.

ಮಂಗಳೂರು: ಬೆಂಗಳೂರಿನ ಬಿಲ್ಲವ ಅಸೋಸಿಯೇಷನ್ ವತಿಯಿಂದ ಸೇವಾದಳ ದಿನಾಚರಣೆಯನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲ್ಲವ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ನಾಟಕ ಹಾಗೂ ಸಿನಿಮಾ ಕಲಾವಿದ ಡಿ. ಆನಂದ ಬೋಳಾರ್ ಅವರ ಪುತ್ರಿ ಸುನಂದಾ ಬೋಳಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೀಪ್ ಪೂಜಾರಿ ವಹಿಸಿದ್ದರು.
ಸಂಘದ ಸೇವಾದಳದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ಅಮೀನ್, ನೇಮಿರಾಜ್, ಹರೀಶ್ ಪೂಜಾರಿ ಹಾಗೂ ಗಿರೀಶ್ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಸುನಂದಾ ಬೋಳಾರ್ ಅವರನ್ನೂ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಂ. ವೇದಕುಮಾರ್ ಸ್ವಾಗತಿಸಿದರು. ಸೇವಾದಳದ ಅಧ್ಯಕ್ಷ ಶ್ರೀಕಾಂತ್ ಪ್ರಸಾದ್ ಮಾತನಾಡಿದರು. ಸೇವಾದಳದ ಸಹ ಅಧ್ಯಕ್ಷ ಗಣೇಶ್ ಗುರುಚರಣ್ ವಂದಿಸಿದರು. ಶ್ರೀದೇವಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ನಾಟಕ ಪ್ರದರ್ಶನ ನಡೆಯಿತು. ಮಕ್ಕಳ ಕಲಾ ಪ್ರತಿಭೆಗೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
