Skip to content
Billava News

ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ : ‘ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತೆ – ಭಾಗ 1’ ಗ್ರಂಥ ಬಿಡುಗಡೆ

ಡೊಂಬಿವಲಿ, ಆ. 17: ಮುಂಬಯಿಯ ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಚೇರಿಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವವು ಆ. 30ರಂದು ಭಕ್ತಿಭಾವದಿಂದ ನಡೆಯಿತು...

By Billavavani
ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ : ‘ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತೆ – ಭಾಗ 1’ ಗ್ರಂಥ ಬಿಡುಗಡೆ

ಡೊಂಬಿವಲಿ, ಆ. 17: ಮುಂಬಯಿಯ ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಚೇರಿಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವವು ಆ. 30ರಂದು ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಪದಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮಿತಿಯ ಅರ್ಚಕ ಈಶ್ವರ್ ಕೋಟ್ಯಾನ್ ಅವರ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠಾಪನೆ ನೆರವೇರಿತು.

Screenshot 2026-09-01 122317.png

ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವದ ಶುಭ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆ, ತತ್ವ ಮತ್ತು ಆದರ್ಶಗಳನ್ನು ಒಳಗೊಂಡ ನಿತ್ಯ ಪಾರಾಯಣ ಗ್ರಂಥ ‘ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತೆ – ಭಾಗ 1’ ಅನ್ನು ಹಿರಿಯ ದಾನಿ ಗಿರಿಜಾ ಸಂಜೀವ ಪಾಲನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್ ಹಾಗೂ ಸ್ಥಳೀಯ ಕಚೇರಿಯ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ಅಸೋಸಿಯೇಶನ್‌ನ ಎಲ್ಲಾ 22 ಸ್ಥಳೀಯ ಕಚೇರಿಗಳಲ್ಲೂ ಇದೇ ಕೃತಿ ಬಿಡುಗಡೆಯಾಗಿರುವುದು ವಿಶೇಷವಾಗಿದೆ.

Screenshot 2026-09-01 122242.png

ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ಮಂಜಪ್ಪ ಕೆ. ಪೂಜಾರಿ, ಕಾರ್ಯಾಧ್ಯಕ್ಷ ಶ್ರೀಧರ್ ಬಿ. ಅಮೀನ್, ಉಪಾಧ್ಯಕ್ಷರಾದ ಚಂದ್ರಹಾಸ ಎಸ್. ಪಾಲನ್ ಹಾಗೂ ಸಚಿನ್ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ಜೆ.ಜೆ. ಕೋಟ್ಯಾನ್, ಕೋಶಾಧಿಕಾರಿ ಆನಂದ್ ಡಿ. ಪೂಜಾರಿ, ಜತೆ ಕಾರ್ಯದರ್ಶಿ ವಿಠ್ಠಲ್ ಪಿ. ಅಮೀನ್, ಜತೆ ಕೋಶಾಧಿಕಾರಿ ಜಗನ್ನಾಥ್ ಸಿ. ಸನಿಲ್, ಪೂಜಾ ಉಪಸಮಿತಿಯ ಕಾರ್ಯಾಧ್ಯಕ್ಷ ಅನ್ನು ಕೆ. ಪೂಜಾರಿ ಸೇರಿದಂತೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸರ್ವ ಸದಸ್ಯರು ಶ್ರಮಿಸಿದರು.

Screenshot 2026-09-01 122300.png

ಸಮಾರಂಭದಲ್ಲಿ ಪರಿಸರದ ಅಪಾರ ಸಂಖ್ಯೆಯ ಸಮಾಜ ಬಾಂಧವರು, ಕೇಂದ್ರ ಕಚೇರಿ ಹಾಗೂ ವಿವಿಧ ಸ್ಥಳೀಯ ಕಚೇರಿಗಳ ಪ್ರತಿನಿಧಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಪಾಲ್ಗೊಂಡಿದ್ದರು.