Skip to content
Billava News

ಬಿಲ್ಲವರ ಅಸೋಸಿಯೇಷನ್ ಮುಂಬೈ ಕಲ್ವಾ: ನಾರಾಯಣ ಗುರುಗಳ 172ನೇ ಜಯಂತ್ಯುತ್ಸವ ಸಂಪನ್ನ

ಲ್ವಾ ಪಶ್ಚಿಮದ ಖಾರೇಗಾವ್ ಎಂ.ಪಿ. ರೋಡ್, ರೇತಿಬಂದರ್ ನಾಕಾ ಸಮೀಪದ ಪಾರ್ಸಿಕ್ ನಗರದಲ್ಲಿರುವ ಹೋಟೆಲ್ ಅಮಿತ್ ಗಾರ್ಡನ್ ಸಭಾಂಗಣದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಕಲ್ವಾ ಸ್ಥಳೀಯ ಕಚೇರಿ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ನಡೆಯಿತು.

By Billavavani
ಬಿಲ್ಲವರ ಅಸೋಸಿಯೇಷನ್ ಮುಂಬೈ ಕಲ್ವಾ: ನಾರಾಯಣ ಗುರುಗಳ 172ನೇ ಜಯಂತ್ಯುತ್ಸವ ಸಂಪನ್ನ

ಮುಂಬೈ: ಕಲ್ವಾ ಪಶ್ಚಿಮದ ಖಾರೇಗಾವ್ ಎಂ.ಪಿ. ರೋಡ್, ರೇತಿಬಂದರ್ ನಾಕಾ ಸಮೀಪದ ಪಾರ್ಸಿಕ್ ನಗರದಲ್ಲಿರುವ ಹೋಟೆಲ್ ಅಮಿತ್ ಗಾರ್ಡನ್ ಸಭಾಂಗಣದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಕಲ್ವಾ ಸ್ಥಳೀಯ ಕಚೇರಿ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ನಡೆಯಿತು.

ಮುಂದಿನ ದಿನಗಳಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ ಹಾಗೂ ಸಮುದಾಯ ಭವನ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಜಾಗ ಹಾಗೂ ಅನುದಾನ ಕ್ರೋಡೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಮಹತ್ವದ ಯೋಜನೆಯನ್ನು ಸಾಕಾರಗೊಳಿಸಲು ಸಮಾಜದ ಪ್ರತಿಯೊಬ್ಬರೂ ತನು-ಮನ-ಧನದಿಂದ ಸಹಕರಿಸಬೇಕು ಎಂದು ಹರೀಶ್ ಜಿ. ಅಮೀನ್ ಮನವಿ ಮಾಡಿದರು.

WhatsApp Image 2026-09-14 at 4.43.00 PM (1).jpeg

ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

WhatsApp Image 2026-09-15 at 8.47.01 AM.jpeg

‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಹಾಗೂ ‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಯಾಗಿ’ ಎಂಬ ಗುರುಗಳ ಸಂದೇಶದ ಅಡಿಯಲ್ಲೇ ಸಮಿತಿಯ ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿವೆ. ಕಲ್ವಾ ಸ್ಥಳೀಯ ಕಚೇರಿಯ ಅಧ್ಯಕ್ಷ ಸ್ಥಾನವು ಕೇವಲ ಹುದ್ದೆಯಲ್ಲ, ನಿರಂತರ ಸಮಾಜ ಸೇವೆಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

WhatsApp Image 2026-09-14 at 4.43.00 PM (2).jpeg

ಕಲ್ವಾದ ಗುರು ಮಂದಿರವು ಸಾರ್ವಜನಿಕರ ಶ್ರದ್ಧಾ ಕೇಂದ್ರವಾಗಿದ್ದು, ಯಾವುದೇ ಭೇದ-ಭಾವವಿಲ್ಲದೆ ಭಕ್ತರು ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಸಮಿತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಾರ್ಯಕರ್ತರ ಒಗ್ಗಟ್ಟು, ನಿಸ್ವಾರ್ಥ ಸೇವೆ ಹಾಗೂ ಭಕ್ತರ ಪ್ರೋತ್ಸಾಹದಿಂದ ಸಮಾಜಮುಖಿ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಹಿರಿಯ ಕಾರ್ಯಕರ್ತರು, ಯುವಕರು ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ಸಂಘಟನೆಯ ಏಳಿಗೆಗೆ ನೀಡುತ್ತಿರುವ ಕೊಡುಗೆಯನ್ನು ಅವರು ಶ್ಲಾಘಿಸಿದರು.

ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಕೋಶಾಧಿಕಾರಿ ಆನಂದ್ ಬಂಗೇರ ದಂಪತಿ, ಉಪ ಕಾರ್ಯಾಧ್ಯಕ್ಷ ಉಮೇಶ್ ಟಿ. ಕರ್ಕೇರ ದಂಪತಿ, ಅರ್ಚಕ ಪ್ರವೀಣ್ ಸಾಲ್ಯಾನ್ ದಂಪತಿ, ಕಾರ್ಯಕರ್ತೆ ಲೀಲಾ ಕರುಣಾಕರ್ ಪೂಜಾರಿ ದಂಪತಿ ಹಾಗೂ ಹಿರಿಯ ಕಾರ್ಯಕರ್ತೆ ರುಕ್ಮಿಣಿ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

WhatsApp Image 2026-09-14 at 4.43.01 PM (1).jpeg

ಘೋಡ್‌ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಹರೀಶ್ ಡಿ. ಸಾಲ್ಯಾನ್ ಅವರ ಸಂಘಟನಾ ಚಾತುರ್ಯ ಹಾಗೂ ಕಲ್ವಾ ಸ್ಥಳೀಯ ಸಮಿತಿಯ ಸಮಾಜಮುಖಿ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಠಾಣೆ ಹೋಟೆಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ ಮಾತನಾಡಿ, ನಾರಾಯಣ ಗುರುಗಳ ಚಿಂತನೆಗಳು ಸರ್ವಕಾಲಿಕವಾಗಿದ್ದು, ಸಾಮಾಜಿಕ ಸಾಮರಸ್ಯ ಮತ್ತು ಸಮಾಜ ಜಾಗೃತಿಯಲ್ಲಿ ಬಿಲ್ಲವರ ಅಸೋಸಿಯೇಷನ್‌ನಂತಹ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಜಯಂತ್ಯುತ್ಸವದ ಅಂಗವಾಗಿ ಮುಂಜಾನೆ ದೀಪ ಪ್ರಜ್ವಲನೆಯ ಬಳಿಕ ಅರ್ಚಕರಾದ ಕರುಣಾಕರ್ ಸಿ. ಬಂಗೇರ, ಸಂತೋಷ್ ಎಸ್. ಸುವರ್ಣ ಹಾಗೂ ಪ್ರವೀಣ್ ಸಾಲ್ಯಾನ್ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಗುರುಪೂಜೆ, ಗುರು ಸ್ತೋತ್ರ ಪಠಣ ಹಾಗೂ ಪುಣ್ಯವಾಚನ ಶಾಸ್ತ್ರೋಕ್ತವಾಗಿ ನೆರವೇರಿತು.

WhatsApp Image 2026-09-14 at 4.43.01 PM.jpeg

ಭಕ್ತಾದಿಗಳಿಂದ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿಯ ಬಳಿಕ ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಠಾಣೆಯ ಮಾಜಿ ಮೇಯರ್ ಹಾಗೂ ನಗರಸೇವಕಿ ಮೀನಾಕ್ಷಿ ಶಿಂದೆ, ರಘುರಾಮ್ ರಾಯ್, ವಿಹಾಂಗ್ ರತ್ನಾಕರ್ ಶೆಟ್ಟಿ, ಉದ್ಯಮಿ ಮೋಹನ್ ಗೌಡ, ಬಿಲ್ಲವರ ಅಸೋಸಿಯೇಷನ್ ಮುಂಬೈ ಉಪಾಧ್ಯಕ್ಷ ಹಾಗೂ ಕೇಂದ್ರ ಕಚೇರಿ ಉಸ್ತುವಾರಿ ಪುರುಷೋತ್ತಮ ಎಸ್. ಕೋಟ್ಯಾನ್, ಉಪಾಧ್ಯಕ್ಷ ಕೆ. ಸುರೇಶ್ ಕುಮಾರ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರ್, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಗೌರವ ಕಾರ್ಯದರ್ಶಿ ಸದಾಶಿವ್ ವೈ. ಕೋಟ್ಯಾನ್, ಮಾಜಿ ಉಪಾಧ್ಯಕ್ಷ ರಾಜ ವಿ. ಸಾಲ್ಯಾನ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್ ನಿರೂಪಿಸಿದರು.

ಜಯಂತ್ಯುತ್ಸವದ ಯಶಸ್ಸಿಗೆ ಕಲ್ವಾ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷರಾದ ಬಿ.ಸಿ. ಅಮೀನ್ ಹಾಗೂ ಆರ್.ಕೆ. ಅಮೀನ್, ಗೌರವ ಕಾರ್ಯದರ್ಶಿ ಮಮತಾ ಎಂ. ಅಮೀನ್, ಜೊತೆ ಕಾರ್ಯದರ್ಶಿ ಪ್ರಕಾಶ್ ಜಿ. ಪೂಜಾರಿ, ಜೊತೆ ಕೋಶಾಧಿಕಾರಿ ಸುಕನ್ಯಾ ಸಿ. ಪೂಜಾರಿ, ಸ್ಥಳೀಯ ಸಮಿತಿ ಸದಸ್ಯ ವಿಕಾಸ್ ಸೇರಿದಂತೆ ಮಹಿಳಾ ಮತ್ತು ಯುವ ವಿಭಾಗದ ಸದಸ್ಯರು ಸಹಕರಿಸಿದರು.

WhatsApp Image 2026-09-14 at 4.43.01 PM (2).jpegWhatsApp Image 2026-09-14 at 4.43.00 PM (3).jpegWhatsApp Image 2026-09-14 at 4.43.01 PM (3).jpeg