ಬಿಲ್ಲವರ ಅಸೋಸಿಯೇಶನ್ ಮೀರಾ ರೋಡ್: ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ
ಚಿತ್ರ, ವರದಿ: ಉಮೇಶ್ ಕೆ. ಅಂಚನ್

ಮೀರಾ ರೋಡ್ , ಸೆ. 7: ಬಿಲ್ಲವರ ಅಸೋಸಿಯೇಶನ್‌ನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವವನ್ನು ಸೆ. 5ರಂದು ಶನಿವಾರ ಮೀರಾ ರೋಡ್ ಪೂರ್ವ ಸಾಯಿಬಾಬಾ ನಗರದ ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸ್ಥಳೀಯ ಕಚೇರಿಯ ಪದಾಧಿಕಾರಿಗಳು ದೀಪ ಪ್ರಜ್ವಲಿಸುವ ಮೂಲಕ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಅಮೀನ್ ಅವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು.

ಸ್ಥಳೀಯ ಕಚೇರಿಯ ಸದಸ್ಯರು ಹಾಗೂ ಸದಸ್ಯೆಯರಿಂದ ಭಜನೆ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಪುಟಾಣಿಗಳಿಂದ ಕುಣಿತ ಭಜನೆ ನಡೆಯಿತು. ಇದೇ ಸಂದರ್ಭದಲ್ಲಿ ‘ಓಂ ನಮೋ ನಾರಾಯಣಾಯ ಶಿವಾಯ’ ಜಪ ಯಜ್ಞವನ್ನು ಆಯೋಜಿಸಲಾಗಿತ್ತು. ಬುವಾಜಿ ವಿಜಿತೇಂದ್ರ ಸನಿಲ್ ಅವರಿಂದ ಮಹಾ ಮಂಗಳಾರತಿ ನೆರವೇರಿತು. ಸದಾನಂದ ಪೂಜಾರಿ ಹಾಗೂ ಜೀವನ್ ಅಮೀನ್ ಅವರು ಪೂಜಾ ಕಾರ್ಯದಲ್ಲಿ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಕಚೇರಿಯ ಪದಾಧಿಕಾರಿಗಳು ದಾನಿಗಳು, ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿವಿಧ ಅಸೋಸಿಯೇಶನ್‌ಗಳ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳನ್ನು ಗುರುಪ್ರಸಾದ ನೀಡಿ ಗೌರವಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಜಿ. ಅಮೀನ್, ಉಪಾಧ್ಯಕ್ಷ ಮೋಹನ್ ಸಿ. ಕೋಟ್ಯಾನ್, ಗೌರವ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಕೋಶಾಧಿಕಾರಿ ರವಿ ಸನಿಲ್, ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್, ಜೊತೆ ಕೋಶಾಧಿಕಾರಿ ಜಿ.ಕೆ. ಕೆಂಚನಕೆರೆ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಭಾರತಿ ಅಂಚನ್, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಅಂಚನ್, ಯುವಾಭ್ಯುದಯ ಉಪಸಮಿತಿಯ ಕಾರ್ಯದರ್ಶಿ ಯೋಗೀಶ್ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯ ರಜಿತ್ ಸುವರ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ತುಳುನಾಡ ಸೇವಾ ಸಮಾಜದ ಅಧ್ಯಕ್ಷ ಡಾ. ರವಿರಾಜ್ ಸುವರ್ಣ, ಸಮಾಜ ಸೇವಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಬಂಟ್ಸ್ ಫೋರಮ್ ಮೀರಾ-ಭಾಯಂದರ್‌ನ ಸ್ಥಾಪಕ ಸಂತೋಷ್ ರೈ ಬೆಳ್ಳಿಪ್ಪಾಡಿ, ಅಧ್ಯಕ್ಷ ಉದಯ್ ಎಂ. ಶೆಟ್ಟಿ, ಬಂಟರ ಸಂಘದ ಮೀರಾ-ಭಾಯಂದರ್ ಪ್ರಾದೇಶಿಕದ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರುಪಾಡಿ, ಸಮಾಜ ಸೇವಕಿ ಸಂಜನಾ ಕಟಾವಟೆ, ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಗುರುಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಭೋಜ ಬಿ. ಸಾಲ್ಯಾನ್, ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕರ್ಕೇರ, ಉಪಕಾರ್ಯಾಧ್ಯಕ್ಷರಾದ ಎನ್.ಪಿ. ಕೋಟ್ಯಾನ್ ಮತ್ತು ದಿನೇಶ್ ಎಸ್. ಸುವರ್ಣ, ಕಾರ್ಯದರ್ಶಿ ಜಯಲಕ್ಷ್ಮಿ ಎಸ್. ಸಾಲ್ಯಾನ್, ಜೊತೆ ಕಾರ್ಯದರ್ಶಿ ಶೋಭಾ ಎಚ್. ಪೂಜಾರಿ, ಕೋಶಾಧಿಕಾರಿ ವಿಶ್ವನಾಥ್ ಮಾಬಿಯಾನ್, ಜೊತೆ ಕೋಶಾಧಿಕಾರಿ ಲೀಲಾಧರ್ ಸನಿಲ್, ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಸಹಕರಿಸಿದರು.
