ಬಿಲ್ಲವ ಅಸೋಸಿಯೇಷನ್ ಸದಸ್ಯ ಅಮರ್ ಕೇಶವ್ ಕೋಟ್ಯಾನ್ ಅವರಿಗೆ ಫಿಲ್ಮ್‌ಫೇರ್ ಮರಾಠಿ ಪ್ರಶಸ್ತಿ 2026
ಬಿಲ್ಲವ ಅಸೋಸಿಯೇಷನ್‌ನ ಗೌರವಾನ್ವಿತ ಸದಸ್ಯರಾದ ಶ್ರೀ ಅಮರ್ ಕೇಶವ್ ಕೋಟ್ಯಾನ್ ಅವರು ಫಿಲ್ಮ್‌ಫೇರ್ ಮರಾಠಿ ಪ್ರಶಸ್ತಿ 2026ರ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ (Best Playback Singer) ವಿಭಾಗದ ಪ್ರಶಸ್ತಿಯನ್ನು ಪ್ರದಾನ ಮಾಡುವ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಿಲ್ಲವ ಅಸೋಸಿಯೇಷನ್‌ನ ಗೌರವಾನ್ವಿತ ಸದಸ್ಯರಾದ ಶ್ರೀ ಅಮರ್ ಕೇಶವ್ ಕೋಟ್ಯಾನ್ ಅವರು ಫಿಲ್ಮ್‌ಫೇರ್ ಮರಾಠಿ ಪ್ರಶಸ್ತಿ 2026ರ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ (Best Playback Singer) ವಿಭಾಗದ ಪ್ರಶಸ್ತಿಯನ್ನು ಪ್ರದಾನ ಮಾಡುವ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಮಹತ್ವದ ಸಂದರ್ಭದಲ್ಲಿ ಶ್ರೀ ಕೋಟ್ಯಾನ್ ಅವರು ಪ್ರಶಸ್ತಿ ಪ್ರದಾನ ಮಾಡಿದದ್ದು ಬಿಲ್ಲವ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ವಿವಿಧ ವೃತ್ತಿಪರ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮುದಾಯದ ಸದಸ್ಯರು ಸಾಧಿಸುತ್ತಿರುವ ಪ್ರಗತಿ ಮತ್ತು ಯಶಸ್ಸಿಗೆ ಇದು ಮತ್ತೊಂದು ಸಾಕ್ಷಿಯಾಗಿದೆ.
ಪ್ರಸ್ತುತ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶ್ರೀ ಅಮರ್ ಕೇಶವ್ ಕೋಟ್ಯಾನ್ ಅವರು ಸಂಸ್ಥೆಯ ಬಿಸ್ಕಟ್ಸ್ ವಿಭಾಗದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ತಮ್ಮ ನಾಯಕತ್ವ, ವ್ಯವಹಾರಿಕ ಪರಿಣತಿ ಹಾಗೂ ಉದ್ಯಮ ಕ್ಷೇತ್ರದ ಅನುಭವದ ಮೂಲಕ ಅವರು ಸಂಸ್ಥೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ಪ್ರತಿಷ್ಠಿತ ಫಿಲ್ಮ್‌ಫೇರ್ ಮರಾಠಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಅವಕಾಶ ದೊರೆತಿರುವುದು ಶ್ರೀ ಕೋಟ್ಯಾನ್ ಅವರ ವೃತ್ತಿಜೀವನದ ಗಮನಾರ್ಹ ಸಾಧನೆ ಮಾತ್ರವಲ್ಲದೆ, ಸಂಪೂರ್ಣ ಬಿಲ್ಲವ ಸಮಾಜಗೆ ಹೆಮ್ಮೆಯ ವಿಷಯವಾಗಿದೆ.
ಸಮಾಜದ ಸದಸ್ಯರು ವೃತ್ತಿಪರ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದನ್ನು ಈ ಸಾಧನೆ ಬಿಲ್ಲವ ಸಮಾಜಗೆ ಹೆಮ್ಮೆಯ ವಿಷಯವಾಗಿದೆ.

ಈ ಹೆಮ್ಮೆಯ ಸಂದರ್ಭದಲ್ಲಿ ಬಿಲ್ಲವ ಅಸೋಸಿಯೇಷನ್ ವತಿಯಿಂದ ಶ್ರೀ ಅಮರ್ ಕೇಶವ್ ಕೋಟ್ಯಾನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಮುಂದಿನ ವೃತ್ತಿಜೀವನದಲ್ಲಿ ಇನ್ನಷ್ಟು ಯಶಸ್ಸು, ಗೌರವ ಹಾಗೂ ಸಾಧನೆಗಳು ಲಭಿಸಲಿ ಎಂದು ಶುಭ ಹಾರೈಸಿದೆ.
