ಬಿರುವೆರ್ ಕುಡ್ಲ ನೇತೃತ್ವದಲ್ಲಿ ಅ.18ರಂದು ‘ಕಿನ್ನಿ ಪಿಲಿ ಸೀಸನ್–2’
ಕರಾವಳಿಯ ಕಲೆಯಾದ ಪಿಲಿ ವೇಷಕ್ಕೆ ಮಕ್ಕಳನ್ನು ಪರಿಚಯಿಸುವ ಉದ್ದೇಶದಿಂದ ‘ಕಿನ್ನಿ ಪಿಲಿ ಸೀಸನ್–2’ ಕಾರ್ಯಕ್ರಮವನ್ನು ಅಕ್ಟೋಬರ್ 18ರಂದು ಮಂಗಳೂರಿನಲ್ಲಿ ಫ್ರೆಂಡ್ಸ್ ಬಳ್ಳಾಲ್‌ಬಾಗ್ - ಬಿರುವೆರ್ ಕುಡ್ಲ ಸಂಘಟನೆಯ ನೇತೃತ್ವದಲ್ಲಿ ನಡೆಯಲಿ...

ಮಂಗಳೂರು: ಕರಾವಳಿಯ ಕಲೆಯಾದ ಪಿಲಿ ವೇಷಕ್ಕೆ ಮಕ್ಕಳನ್ನು ಪರಿಚಯಿಸುವ ಉದ್ದೇಶದಿಂದ ‘ಕಿನ್ನಿ ಪಿಲಿ ಸೀಸನ್–2’ ಫ್ರೆಂಡ್ಸ್ ಬಳ್ಳಾಲ್‌ಬಾಗ್ - ಬಿರುವೆರ್ ಕುಡ್ಲ ಸಂಘಟನೆಯ ನೇತೃತ್ವದಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮವು ಅಕ್ಟೋಬರ್ 18ರಂದು ಮಂಗಳೂರು ದಸರಾ ಸಂಭ್ರಮದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಲಿದೆ.

ಬಿರುವೆರ್ ಕುಡ್ಲ ಸಂಸ್ಥೆಯ ಸಂಸ್ಥಾಪಕ ಉದಯ ಪೂಜಾರಿ ಹಾಗೂ ತಂಡವು ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದು, ಮಂಗಳೂರು ದಸರಾ ಸಂದರ್ಭದಲ್ಲಿ ತಂಡದ ಪಿಲಿ ವೇಷ ಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿದೆ.
ಮಕ್ಕಳಿಗಾಗಿ ಪ್ರತಿವರ್ಷ ರೂಪಿಸಲಾಗಿರುವ ‘ಕಿನ್ನಿ ಪಿಲಿ’ ಕಾರ್ಯಕ್ರಮವು ಪಿಲಿ ವೇಷದ ಬಾಲರೂಪವಾಗಿದ್ದು, ಪುಟಾಣಿ ಮಕ್ಕಳು ಹುಲಿಯ ಬಣ್ಣ-ವಿನ್ಯಾಸದಲ್ಲಿ ಮೈಮೇಲೆ ಬಣ್ಣ ಹಚ್ಚಿಕೊಂಡು ಸಾಂಪ್ರದಾಯಿಕ ಚೆಂಡೆ-ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಲಿದ್ದಾರೆ. ಮಕ್ಕಳ ಉತ್ಸಾಹ, ಕರಾವಳಿಯ ಜನಪದ ಸಂಸ್ಕೃತಿ ಮತ್ತು ದಸರಾ ಸಂಭ್ರಮ ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳಲಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.
ಅಕ್ಟೋಬರ್ 18ರಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಮಂಗಳೂರು ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ನಿರೀಕ್ಷೆಯಿದೆ. ಪುಟಾಣಿಗಳ ಪಿಲಿ ವೇಷದ ನೃತ್ಯ ಪ್ರದರ್ಶನ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
