Skip to content
Billava News

ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕ: ಪ್ರೀತಮ್ ಪೂಜಾರಿಗೆ ‘ಬ್ರಹ್ಮಶ್ರೀ’ ಚಿನ್ನದ ಪದಕ ಗೌರವ

ಕುಂದಾಪುರದ ಬಸ್ ಕಂಡಕ್ಟರ್ ಅವರ ಪುತ್ರ ಪ್ರೀತಮ್ ಪೂಜಾರಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ, ನಾರಾಯಣ ಗುರು ಯುವ ವೇದಿಕೆಯ ವತಿಯಿಂದ ಪ್ರತಿಷ್ಠಿತ ‘ಬ್ರಹ್ಮಶ್ರೀ’ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

By Billavavani
ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕ: ಪ್ರೀತಮ್ ಪೂಜಾರಿಗೆ ‘ಬ್ರಹ್ಮಶ್ರೀ’ ಚಿನ್ನದ ಪದಕ ಗೌರವ

ಮಂಗಳೂರು: ಕುಂದಾಪುರದ ಬಸ್ ಕಂಡಕ್ಟರ್ ಅವರ ಪುತ್ರ ಪ್ರೀತಮ್ ಪೂಜಾರಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ, ನಾರಾಯಣ ಗುರು ಯುವ ವೇದಿಕೆಯ ವತಿಯಿಂದ ಪ್ರತಿಷ್ಠಿತ 27ನೇ ವರ್ಷದ ‘ಬ್ರಹ್ಮಶ್ರೀ’ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ, ಅವರ ವಿವರಗಳನ್ನು ಪಡೆದು ಸಂಪರ್ಕಿಸಿದ ನಾರಾಯಣ ಗುರು ಯುವ ವೇದಿಕೆಯ ಪದಾಧಿಕಾರಿಗಳು, ಪ್ರೀತಮ್ ಪೂಜಾರಿ ಅವರನ್ನು ಸನ್ಮಾನಿಸಿ ಅವರ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ನಾರಾಯಣ ಗುರು ಯುವ ವೇದಿಕೆಯ ಪದಾಧಿಕಾರಿಗಳಿಗೆ ಹಾಗೂ ವಿಶೇಷವಾಗಿ ಶ್ರೀ ಎಂ. ಎಸ್. ಕೋಟ್ಯಾನ್ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಪ್ರೀತಮ್ ಪೂಜಾರಿ ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದ್ದು, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಅವರು ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಲಾಯಿತು.

more details awaited..