ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ಜಯ ಸಿ. ಸುವರ್ಣ ಅಭಿಮಾನಿಗಳ ಬಳಗ ಜೋಗೇಶ್ವರಿ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ
ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ಜಯ ಸಿ. ಸುವರ್ಣ ಅಭಿಮಾನಿಗಳ ಬಳಗ ಜೋಗೇಶ್ವರಿ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

ಮುಂಬೈ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಆಗಸ್ಟ್ 30, 2026ರ ಭಾನುವಾರ ಜೋಗೇಶ್ವರಿ ಪೂರ್ವದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ಜಯ ಸಿ. ಸುವರ್ಣ ಅಭಿಮಾನಿಗಳ ಬಳಗ, ಜೋಗೇಶ್ವರಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೋಗೇಶ್ವರಿ (ಪೂರ್ವ), ಪಾರಸ್ ನಗರದಲ್ಲಿರುವ ರಾಜಮಾತಾ ಜಿಜಾವು ಸಭಾಗೃಹದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಗುರು ಪೂಜೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ತತ್ವ, ಆದರ್ಶಗಳು ಹಾಗೂ ಸಮಾಜ ಸುಧಾರಣೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.
ಗುರು ಪೂಜೆಯ ಬಳಿಕ ನಡೆದ ಭಜನಾ ಕಾರ್ಯಕ್ರಮವು ಭಕ್ತರ ಗಮನ ಸೆಳೆಯಿತು. ನಾರಾಯಣ ಗುರುಗಳ ಸಂದೇಶವಾದ “ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು” ಎಂಬ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಆಯೋಜಕರು, ಅಭಿಮಾನಿಗಳು, ಭಕ್ತರು ಹಾಗೂ ಸಮಾಜದ ವಿವಿಧ ಗಣ್ಯರು ಉಪಸ್ಥಿತರಿದ್ದು, ನಾರಾಯಣ ಗುರುಗಳ 172ನೇ ಜಯಂತಿ ಆಚರಣೆಗೆ ಮೆರುಗು ತಂದರು.
