Skip to content
Billava News

2026–27ನೇ ಸಾಲಿನ ರೊಟರಾಕ್ಟ್ ಕ್ಲಬ್ ಆಫ್ ಸುಭಾಷ್ ನಗರದ ನೂತನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಆಯ್ಕೆ

2026–27ನೇ ಸಾಲಿನ ರೊಟರಾಕ್ಟ್ ಕ್ಲಬ್ ಆಫ್ ಸುಭಾಷ್ ನಗರದ 20ನೇ ವರ್ಷದ ನೂತನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಆಯ್ಕೆಯಾಗಿದ್ದಾರೆ.

By Billavavani
2026–27ನೇ ಸಾಲಿನ ರೊಟರಾಕ್ಟ್ ಕ್ಲಬ್ ಆಫ್ ಸುಭಾಷ್ ನಗರದ ನೂತನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಆಯ್ಕೆ

ಉಡುಪಿ: 2026–27ನೇ ಸಾಲಿನ ರೊಟರಾಕ್ಟ್ ಕ್ಲಬ್ ಆಫ್ ಸುಭಾಷ್ ನಗರದ 20ನೇ ವರ್ಷದ ನೂತನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಆಯ್ಕೆಯಾಗಿದ್ದಾರೆ.

ಸುಮಾರು ಎರಡು ದಶಕಗಳಿಂದ ರೊಟರಾಕ್ಟ್ ಕ್ಲಬ್ ಆಫ್ ಸುಭಾಷ್ ನಗರದ ಸಕ್ರಿಯ ಸದಸ್ಯರಾಗಿರುವ ಚಿದಾನಂದ ಪೂಜಾರಿ ಅವರು ನಾಲ್ಕು ಬಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಸಂಘಟನೆಯ ಬೆಳವಣಿಗೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಪೋಲಿಯೋದಿಂದ ಎರಡೂ ಕಾಲುಗಳ ಚಲನೆಯ ಸಾಮರ್ಥ್ಯ ಕಳೆದುಕೊಂಡಿದ್ದರೂ ಆತ್ಮವಿಶ್ವಾಸ, ಛಲ ಮತ್ತು ದೃಢ ಸಂಕಲ್ಪದೊಂದಿಗೆ ಜೀವನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅವರು, ಕುಂಜಾರುಗಿರಿ ಕ್ರಾಸ್‌ನಲ್ಲಿರುವ ತಮ್ಮ ಮೊಬೈಲ್ ಅಂಗಡಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಸಮಾಜಸೇವೆಯಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಅಚ್ಚಡದಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಶಂಕರಪುರದ ಸೈಂಟ್ ಜಾನ್ಸ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿರುವ ಚಿದಾನಂದ ಪೂಜಾರಿ ಅವರು ರೊಟರಾಕ್ಟ್ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ Outstanding Rotaractor Award, ಪಂಚರತ್ನ ಪ್ರಶಸ್ತಿ, Best Secretary Award ಹಾಗೂ DR Citation Award ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ ಭಾಜನರಾಗಿದ್ದಾರೆ.

ಇದರ ಜೊತೆಗೆ ಹವ್ಯಾಸಿ ಸಂಗೀತ ಕಲಾವಿದರಾಗಿರುವ ಅವರು ತಮ್ಮ ಸರಳ ವ್ಯಕ್ತಿತ್ವ, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೊಟರಾಕ್ಟ್ ಕ್ಲಬ್ ಆಫ್ ಸುಭಾಷ್ ನಗರದ 20ನೇ ವರ್ಷದ ಅಧ್ಯಕ್ಷರಾಗಿ ಅವರ ಆಯ್ಕೆಯು ಕ್ಲಬ್ ಸದಸ್ಯರು ಹಾಗೂ ಸಮಾಜದ ಎಲ್ಲರಿಗೂ ಹೆಮ್ಮೆಯ ಮತ್ತು ಸಂತಸದ ಸಂಗತಿಯಾಗಿದೆ.

ನಿಮ್ಮ ಯುವ ನಾಯಕತ್ವ, ಸೇವಾ ಮನೋಭಾವ ಮತ್ತು ಸಮಾಜದ ಮೇಲಿನ ಕಾಳಜಿಯಿಂದ ಕ್ಲಬ್ ಹಾಗೂ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ನಿಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.