Skip to content
Trending Topic

ಕಾಮನ್‌ವೆಲ್ತ್ ಕ್ರೀಡಾಕೂಟ 2026: ಪುರುಷರ 100 ಮೀ. T47 ಫೈನಲ್‌ನಲ್ಲಿ ದಿಲೀಪ್ ಗಾವಿತ್‌ಗೆ ಚಿನ್ನ, ಮುರಳಿ ಶ್ರೀಶಂಕರ್‌ಗೆ ಬೆಳ್ಳಿ

ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟ 2026ರ ಏಳನೇ ದಿನ ಭಾರತಕ್ಕೆ ಮತ್ತಷ್ಟು ಪದಕಗಳ ಸಂಭ್ರಮ ತಂದಿತು. ಪುರುಷರ 100 ಮೀಟರ್...

By Billavavani
ಕಾಮನ್‌ವೆಲ್ತ್ ಕ್ರೀಡಾಕೂಟ 2026: ಪುರುಷರ 100 ಮೀ. T47 ಫೈನಲ್‌ನಲ್ಲಿ ದಿಲೀಪ್ ಗಾವಿತ್‌ಗೆ ಚಿನ್ನ, ಮುರಳಿ ಶ್ರೀಶಂಕರ್‌ಗೆ ಬೆಳ್ಳಿ

ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟ 2026ರ ಏಳನೇ ದಿನ ಭಾರತಕ್ಕೆ ಮತ್ತಷ್ಟು ಪದಕಗಳ ಸಂಭ್ರಮ ತಂದಿತು. ಪುರುಷರ 100 ಮೀಟರ್ T47 ಫೈನಲ್‌ನಲ್ಲಿ ದಿಲೀಪ್ ಮಹಾದು ಗಾವಿತ್ ಚಿನ್ನದ ಪದಕ ಗೆದ್ದರೆ, ಮೊಹಮ್ಮದ್ ಬಾಸಿಲ್ ಮೋರ್ಸಿಂಗನಕತ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇದೇ ವೇಳೆ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್ ಫೈನಲ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಭಾರತದ ಪದಕಪಟ್ಟಿಗೆ ಮತ್ತೊಂದು ಪದಕ ಸೇರಿಸಿದರು.

100 ಮೀಟರ್ T47 ಫೈನಲ್‌ನಲ್ಲಿ ದಿಲೀಪ್ ಗಾವಿತ್ ಮತ್ತು ಮೊಹಮ್ಮದ್ ಬಾಸಿಲ್ ನಡುವಿನ ಪೈಪೋಟಿ ಅತ್ಯಂತ ರೋಚಕವಾಗಿದ್ದು, ಫೋಟೋ ಫಿನಿಷ್‌ನಲ್ಲಿ ಗಾವಿತ್ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಬಾಸಿಲ್ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದರು.

ಮತ್ತೊಂದೆಡೆ, ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತ ಎರಡನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ರನ್ನರ್-ಅಪ್ ಸ್ಥಾನ ಪಡೆದ ಸಾಧನೆ ಮಾಡಿದರು.