Skip to content
Trending Topic

ತುಳುನಾಡಿನ ಪ್ರಮುಖ ಹಬ್ಬ ನಾಗರ ಪಂಚಮಿಗೆ ಸರಕಾರಿ ರಜೆ ಘೋಷಣೆಗೆ ಮನವಿ : ಶಾಸಕ ಉಮಾನಾಥ ಕೋಟ್ಯಾನ್

ತುಳುನಾಡಿನ ಜನರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ನಾಗರ ಪಂಚಮಿ ಹಬ್ಬಕ್ಕೆ ಸರಕಾರಿ ರಜೆ ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್.

By Billavavani
ತುಳುನಾಡಿನ ಪ್ರಮುಖ ಹಬ್ಬ ನಾಗರ ಪಂಚಮಿಗೆ ಸರಕಾರಿ ರಜೆ ಘೋಷಣೆಗೆ ಮನವಿ : ಶಾಸಕ ಉಮಾನಾಥ ಕೋಟ್ಯಾನ್

ಮಂಗಳೂರು: ತುಳುನಾಡಿನ ಜನರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ನಾಗರ ಪಂಚಮಿ ಹಬ್ಬಕ್ಕೆ ಸರಕಾರಿ ರಜೆ ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್.

1001119672.jpg

ನಾಗರ ಪಂಚಮಿ ತುಳುನಾಡಿನ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾಗಿದೆ. ನಾಗದೇವರನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸುವ ಈ ಹಬ್ಬವನ್ನು ಕರಾವಳಿ ಕರ್ನಾಟಕದಾದ್ಯಂತ ವಿಶೇಷ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ಆಚರಿಸಲಾಗುತ್ತದೆ.

ತುಳುನಾಡಿನ ನಾಗಾರಾಧನೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಇಲ್ಲಿನ ಪ್ರಾಚೀನ ಸಂಪ್ರದಾಯ, ಪ್ರಕೃತಿ ಆರಾಧನೆ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಾಗಬನಗಳು ಹಾಗೂ ನಾಗಾರಾಧನಾ ಕೇಂದ್ರಗಳು ಇಂದಿಗೂ ಜನರ ನಂಬಿಕೆ ಮತ್ತು ಪರಂಪರೆಯ ಪ್ರಮುಖ ಭಾಗವಾ

ಗಿವೆ.