ಶಿಕ್ಷಣ ಮತ್ತು ಮಾನವೀಯತೆಯಿಂದ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ: ರಾಜೇಶ್ ಬಲ್ಯ
ಬಂಟ್ವಾಳ: ಅ. 29: ಶ್ರೀ ನಾರಾಯಣಗುರುಗಳು ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ, ಸ್ವಾಭಿಮಾನ ಹಾಗೂ ಸಮಾನತೆಯ ಪ್ರಮುಖ ಸಾಧನವಾಗಿ ಪ್ರತಿಪಾದಿಸಿದ್ದರು. ಜಾತಿ-ಧರ್ಮದ ಭೇದಭಾವಗಳನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ಸಾರಿದ ಅವರು, ಜ್ಞಾನದ ಮೂಲಕ ಅಜ್ಞಾನ ಮತ್ತು ಸಾಮಾಜಿಕ ...

ಬಂಟ್ವಾಳ: ಅ. 29: ಶ್ರೀ ನಾರಾಯಣಗುರುಗಳು ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ, ಸ್ವಾಭಿಮಾನ ಹಾಗೂ ಸಮಾನತೆಯ ಪ್ರಮುಖ ಸಾಧನವಾಗಿ ಪ್ರತಿಪಾದಿಸಿದ್ದರು. ಜಾತಿ-ಧರ್ಮದ ಭೇದಭಾವಗಳನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ಸಾರಿದ ಅವರು, ಜ್ಞಾನದ ಮೂಲಕ ಅಜ್ಞಾನ ಮತ್ತು ಸಾಮಾಜಿಕ ಅಸಮಾನತೆಗಳನ್ನು ದೂರ ಮಾಡಲು ಕರೆ ನೀಡಿದ್ದರು ಎಂದು ನಿರೂಪಕ ರಾಜೇಶ್ ಬಲ್ಯ ಹೇಳಿದರು.
ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಒಂದಕ್ಕೊಂದು ಪೂರಕವಾದಾಗ ಮಾತ್ರ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯ ನೆಲೆಸಲು ಸಾಧ್ಯ. ನಾರಾಯಣಗುರುಗಳ ಚಿಂತನೆಗಳು ಇಂದಿನ ಸಮಾಜಕ್ಕೂ ಜ್ಞಾನದ ಬೆಳಕು ಮತ್ತು ಮಾನವೀಯತೆಯ ದಾರಿದೀಪವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಅವರು ನಗ್ರಿಯ ಲತಾ ಹರೀಶ್ ಪೂಜಾರಿ ಅವರ ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 84 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಸುಭಾಷ್ ನಗರದ ಅಧ್ಯಕ್ಷ ಮೋಹನ್ ದಾಸ್ ಪೂಜಾರಿ ಸಜಿಪ, ಶ್ರೀ ಶಾರದಾ ಮಂದಿರದ ಮಾಜಿ ಅಧ್ಯಕ್ಷ ರತ್ನಾಕರ ಪೂಜಾರಿ, ನಾಡಾರ್ ಯುವಕ ಮಂಡಲದ ಅಧ್ಯಕ್ಷ ನಾಗೇಶ್ ಪೂಜಾರಿ ಕೊಟ್ಟಾರಿಪಾಲು, ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ದ್ವಿತೀಯ ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಅಜೆಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಹಾಗೂ ನವೀನ್ ಕಾರಾಜೆ ಉಪಸ್ಥಿತರಿದ್ದರು.
