Skip to content
Billava News

ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ‘ಎಸ್ಕೇಪ್ : ಪೂರ್ಣದಿಂದ ಶೂನ್ಯದೆಡೆಗೆ’ ಆಯ್ಕೆ

ಮಂಗಳೂರು: ಮಂಗಳೂರಿನ ಪ್ರತಿಭಾವಂತ ಚಿತ್ರತಂಡದ ಕಿರುಚಿತ್ರ ‘ಎಸ್ಕೇಪ್ : ಪೂರ್ಣದಿಂದ ಶೂನ್ಯದೆಡೆಗೆ’ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ (BISFF 2026)ಕ್ಕೆ ಆಯ್ಕೆಯಾಗಿದೆ.

By Billavavani

ಚಿರಾಗ್ ಬಜಾಲ್ ನಿರ್ದೇಶನದ ಈ ಕಿರುಚಿತ್ರಕ್ಕೆ ಪ್ರಥಮ್ ಅಂಚನ್ ಛಾಯಾಗ್ರಹಣ ಮಾಡಿದ್ದಾರೆ. ಹಿರಿಯ ಕಲಾವಿದ ಸದಾಶಿವ ಅಮೀನ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ರೋಹಿತ್ ಶೆಟ್ಟಿ ಕಳಸ ಹಾಗೂ ಸಹನಾ ಪೂಂಜಾ ತಾರಾಗಣದಲ್ಲಿದ್ದಾರೆ.

C38736FF-D145-4D68-96EF-2F8D81D65C14.jpeg

ಕಾರ್ತಿಕ್ ನಾಯರ್ ಸಂಕಲನ ನಿರ್ವಹಿಸಿದ್ದು, ಚಿರಾಗ್ ಪಿ. ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲೋಶ್ ಪೂಜಾರಿ ಹಾಗೂ ಗಣೇಶ್ ಪೂಜಾರಿ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಜ್ರೇಶ್ ರಾವ್ ಸಹಾಯಕ ನಿರ್ದೇಶಕರಾಗಿ ತಂಡದಲ್ಲಿ ಕೈಜೋಡಿಸಿದ್ದಾರೆ.

‘ಹಿಡನ್ ಸ್ಟೋರೀಸ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಎಸ್ಕೇಪ್ : ಪೂರ್ಣದಿಂದ ಶೂನ್ಯದೆಡೆಗೆ’ಗೆ ‘ಯೋಗ್ ಸ್ಟುಡಿಯೋಸ್’ ಹಾಗೂ ‘ಸುಮುಖ ಪ್ರೊಡಕ್ಷನ್’ ಸಹ-ನಿರ್ಮಾಣದ ಬೆಂಬಲ ನೀಡಿವೆ.

ಮಂಗಳೂರಿನ ಸ್ಥಳೀಯ ಪ್ರತಿಭೆಗಳು ಹಾಗೂ ತಂತ್ರಜ್ಞರನ್ನು ಒಳಗೊಂಡಿರುವ ಈ ಕಿರುಚಿತ್ರವು ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ. ಪ್ರಾದೇಶಿಕ ಕಥನಗಳು ಹಾಗೂ ಹೊಸ ಪ್ರತಿಭೆಗಳಿಗೆ ರಾಷ್ಟ್ರೀಯ-ಅಂತರರಾಷ್ಟ್ರೀಯ ವೇದಿಕೆ ದೊರೆಯುತ್ತಿರುವುದಕ್ಕೆ ಈ ಆಯ್ಕೆ ಮತ್ತೊಂದು ಉದಾಹರಣೆಯಾಗಿದೆ.

DC7A3E88-16FE-4261-871B-2A75C7767141.jpeg