ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಶೈನಿ ಅಸ್ಮಾ ಸಲ್ಡಾನಾಗೆ ಕಾರ್ಕಳ ಶಾಸಕರು ಸುನಿಲ್ ಕುಮಾರ್ ಅಭಿನಂದನೆ
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಕು. ಶೈನಿ ಅಸ್ಮಾ ಸಲ್ಡಾನಾ ಅವರು ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಕು. ಶೈನಿ ಅಸ್ಮಾ ಸಲ್ಡಾನಾ ಅವರು ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಠಿಣ ತರಬೇತಿ ಹಾಗೂ ಅಗತ್ಯ ವೃತ್ತಿಪರ ಅರ್ಹತೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಶೈನಿ ಅಸ್ಮಾ ಸಲ್ಡಾನಾ ಅವರು ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಪಡೆದುಕೊಂಡಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯ ಮಹಿಳೆಯರ ಸಾಧನೆಯ ಸಾಲಿಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾರ್ಕಳ ಶಾಸಕರು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಅವರು ಪ್ರಮುಖರೊಂದಿಗೆ ಕೌಡೂರಿನ ರಂಗನಪಲ್ಕೆ ನಿವಾಸಕ್ಕೆ ಭೇಟಿ ನೀಡಿ ಶೈನಿ ಅಸ್ಮಾ ಸಲ್ಡಾನಾ ಅವರನ್ನು ಅಭಿನಂದಿಸಿದರು. ಅವರ ಸಾಧನೆಯನ್ನು ಶ್ಲಾಘಿಸಿ, ಮುಂದಿನ ವೃತ್ತಿ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಯುವತಿಯರಿಗೆ ಹಾಗೂ ಪೈಲಟ್ ವೃತ್ತಿಯನ್ನು ಕನಸು ಕಾಣುವ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿದೆ.
ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದ ಮೂಲಕ ಗುರಿ ಸಾಧಿಸಬಹುದು ಎಂಬುದನ್ನು ಶೈನಿ ಅಸ್ಮಾ ಸಲ್ಡಾನಾ ಅವರ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ.