Skip to content
Billava News

ಯುವವಾಹಿನಿ (ರಿ.) ಕೊಲ್ಯ ಘಟಕ: 30 ದಿನಗಳ ಉಚಿತ ಬ್ರೈಡಲ್ ಮೇಕಪ್ ತರಬೇತಿಗೆ ಚಾಲನೆ

ಮಹಿಳೆಯರು ಕೌಶಲ್ಯವನ್ನು ಕಲಿತು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಯುವವಾಹಿನಿ (ರಿ.) ಕೊಲ್ಯ ಘಟಕ...

By Billavavani
ಯುವವಾಹಿನಿ (ರಿ.) ಕೊಲ್ಯ ಘಟಕ:  30 ದಿನಗಳ ಉಚಿತ ಬ್ರೈಡಲ್ ಮೇಕಪ್ ತರಬೇತಿಗೆ ಚಾಲನೆ

ಮಂಗಳೂರು: ಮಹಿಳೆಯರು ಕೌಶಲ್ಯವನ್ನು ಕಲಿತು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಯುವವಾಹಿನಿ (ರಿ.) ಕೊಲ್ಯ ಘಟಕ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (KSTA) ಮಂಗಳೂರು ಇವರ ಸಹಭಾಗಿತ್ವದಲ್ಲಿ 30 ದಿನಗಳ ಉಚಿತ ಬ್ರೈಡಲ್ ಮೇಕಪ್ ತರಬೇತಿಗೆ ಚಾಲನೆ ನೀಡಲಾಯಿತು.

1001169726.jpg

ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 23ರಂದು KSTA ಸಭಾಂಗಣದಲ್ಲಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಅಧಿಕಾರಿ ಶೈಲಾ ಕಾರ್ಗಿ ಉದ್ಘಾಟಿಸಿ ಮಾತನಾಡಿ, ತರಬೇತಿಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಕೌಶಲ್ಯವನ್ನು ಸಂಪೂರ್ಣವಾಗಿ ಕಲಿತು ಪ್ರತಿಯೊಬ್ಬ ಶಿಬಿರಾರ್ಥಿಯೂ ಸ್ವ ಉದ್ಯೋಗ ಆರಂಭಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.

1001169728.jpg

ಯುವವಾಹಿನಿ (ರಿ.) ಕೇಂದ್ರ ಸಮಿತಿ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಮಾತನಾಡಿ, ಯುವವಾಹಿನಿ ಕೊಲ್ಯ ಘಟಕದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಫಲಿತಾಂಶ ಆಧಾರಿತವಾಗಿದ್ದು, ಬ್ರೈಡಲ್ ಮೇಕಪ್ ತರಬೇತಿಯು ಮಹಿಳೆಯರಿಗೆ ಸ್ವ ಉದ್ಯೋಗ ಆರಂಭಿಸಲು ಉತ್ತಮ ಅವಕಾಶ ಕಲ್ಪಿಸಲಿದೆ ಎಂದರು.

1001169727.jpg

ಕೊಲ್ಯ ಘಟಕದ ದ್ವಿತೀಯ ಉಪಾಧ್ಯಕ್ಷ ಲತೀಶ್ ಪಾಪುದಡಿ ತರಬೇತಿಯಲ್ಲಿ ಭಾಗವಹಿಸುತ್ತಿರುವ ಮಹಿಳೆಯರಿಗೆ ಶುಭ ಹಾರೈಸಿದರು. ಕೇಂದ್ರ ಸಮಿತಿ ಮಹಿಳಾ ಸಂಘಟನಾ ನಿರ್ದೇಶಕಿ ಹಾಗೂ ಕೊಲ್ಯ ಘಟಕದ ಮಾಜಿ ಅಧ್ಯಕ್ಷೆ ಸುಧಾ ಸುರೇಶ್ ಮಾತನಾಡಿ, ಇಂತಹ ಕೌಶಲ್ಯಾಧಾರಿತ ತರಬೇತಿಗಳಿಂದ ಮಹಿಳೆಯರ ಜೀವನದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಿದೆ. ಕಲಿಯುವ ಆಸಕ್ತಿಯಿಂದ ಸಂಪೂರ್ಣ ತರಬೇತಿಯಲ್ಲಿ ಭಾಗವಹಿಸಿ, ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.

1001169724.jpg

ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ತರಬೇತಿಯ ನಿಯಮಗಳು ಹಾಗೂ ಅದರ ಮಹತ್ವದ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಹೆಚ್ಚಿನ ಬೇಡಿಕೆಯಿರುವ ಬ್ರೈಡಲ್ ಮೇಕಪ್ ಕೌಶಲ್ಯವನ್ನು ಕಲಿತು ತರಬೇತಿಯಲ್ಲಿ ಭಾಗವಹಿಸುವವರು ಉತ್ತಮ ಆದಾಯ ಗಳಿಸುವಂತಾಗಬೇಕು ಎಂದು ಆಶಿಸಿದರು.

ತರಬೇತಿಗೆ ಪ್ರಾಯೋಜಕತ್ವ ನೀಡಿದ ಸಿಡಾಕ್ ಸಂಸ್ಥೆ ಹಾಗೂ ತರಬೇತಿ ನಡೆಸಲು ಸ್ಥಳಾವಕಾಶ ಕಲ್ಪಿಸಿದ KSTA, ಗೋರಿಗುಡ್ಡ ಸಂಸ್ಥೆಗೆ ಜೀವನ್ ಕೊಲ್ಯ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಿಡಾಕ್ ಸಂಸ್ಥೆಯ ಉಪನಿರ್ದೇಶಕ ಶಿವಾನಂದ ಏಲಿಗಾರ್, KSTA ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್ ಹಾಗೂ KSTA ರಾಜ್ಯ ಕೋಶಾಧಿಕಾರಿ ಪ್ರಜ್ವಲ್ ಕುಮಾರ್ ಉಪಸ್ಥಿತರಿದ್ದರು.

ಸುಮಾರು 35 ಮಹಿಳೆಯರು 30 ದಿನಗಳ ಉಚಿತ ಬ್ರೈಡಲ್ ಮೇಕಪ್ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.