ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗಯನ್ ಪೂಜಾರಿಗೆ ಕಂಚಿನ ಪದಕ
ಮೂಲ್ಕಿ ಶ್ರೀ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗಯನ್ ಪೂಜಾರಿ ಅವರು ಕರಾಟೆ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಮೂಲ್ಕಿ: ಮೂಲ್ಕಿ ಶ್ರೀ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗಯನ್ ಪೂಜಾರಿ ಅವರು ಕರಾಟೆ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಇಂಟರ್‌ನ್ಯಾಷನಲ್ ಯಾಮೊಟೊ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಸ್ಪೋರ್ಟ್ಸ್ ಕರಾಟೆ ಮಾರ್ಷಿಯಲ್ ಆರ್ಟ್ಸ್ ಸ್ಕೂಲ್, ಸುರತ್ಕಲ್ ವತಿಯಿಂದ ಆಯೋಜಿಸಲಾದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್–2026 ಇಂಡಿಪೆಂಡೆನ್ಸ್ ಕಪ್ ಸ್ಪರ್ಧೆಯಲ್ಲಿ ಗಯನ್ ಪೂಜಾರಿ ಅವರು ಭಾಗವಹಿಸಿದ್ದರು.
ಸ್ಪರ್ಧೆಯ ಕಟಾ ವಿಭಾಗದಲ್ಲಿ ಕಂಚಿನ ಪದಕ (Bronze Medal) ಗೆದ್ದಿರುವ ಅವರು, ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೂಲ್ಕಿಯ ಸೌಮ್ಯ ಎಸ್. ಪೂಜಾರಿ ಅವರ ಪುತ್ರನಾಗಿರುವ ಗಯನ್ ಪೂಜಾರಿ ಅವರ ಸಾಧನೆಯ ಹಾದಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಗೌರವ, ಪುರಸ್ಕಾರಗಳು ಅವರ ಮುಡಿಗೇರಲಿ ಹಾಗೂ ಶ್ರೀ ನಾರಾಯಣ ಗುರುಗಳ ಅನುಗ್ರಹ ಸದಾ ಇರಲಿ ಎಂದು ಶುಭ ಹಾರೈಸಲಾಗಿದೆ.
