Skip to content
Billava News

ಗೆಜ್ಜೆಗಿರಿಯ ಅಭಿವೃದ್ಧಿ ಸಮಾಜದ ಪ್ರಗತಿಯ ಸಂಕೇತ: ಡಾ. ಎನ್.ಟಿ. ಅಂಚನ್

ಗೆಜ್ಜೆಗಿರಿ: ಪಡುಬಿದ್ರೆಯ ಪ್ರಖ್ಯಾತ ಆಯುರ್ವೇದ ವೈದ್ಯರಾದ ಡಾ. ನಾರಾಯಣ ಟಿ. ಅಂಚನ್ ಅವರು ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ, ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಯಿ ಬೈದೆತಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಯನ್ನು ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು.

By Billavavani

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿರುವ ಅವರು ಕೇಂದ್ರದ ಕಾಮಗಾರಿಯ ಕುರಿತು ಮಾಹಿತಿ ನೀಡಿದರು. ಧನ್ವಂತರಿ ಮಾತೆಯ ಆಶೀರ್ವಾದದೊಂದಿಗೆ ದೇಯಿ ಬೈದೆತಿ ಅವರ ಹೆಸರಿನಲ್ಲಿ ಆಯುರ್ವೇದ ಆಸ್ಪತ್ರೆಯನ್ನು ಮುಂದಿನ ದಿನಗಳಲ್ಲಿ ಗೆಜ್ಜೆಗಿರಿ ಅಭಿವೃದ್ಧಿ ಸಮಿತಿಯ ವತಿಯಿಂದಲೇ ನಡೆಸುವ ಉದ್ದೇಶ ಮತ್ತು ಪ್ರಯತ್ನವಿದೆ ಎಂದು ತಿಳಿಸಿದರು.

ಗೆಜ್ಜೆಗಿರಿಯ ಅಭಿವೃದ್ಧಿಯು ಕೇವಲ ಕ್ಷೇತ್ರದ ಬೆಳವಣಿಗೆಯಲ್ಲ, ಅದು ಸಮಾಜದ ಪ್ರಗತಿ ಮತ್ತು ಆರೋಗ್ಯ ಸೇವೆಯ ವಿಸ್ತರಣೆಯ ಸಂಕೇತವಾಗಿದೆ ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

ಕ್ಷೇತ್ರದ ವತಿಯಿಂದ ಡಾ. ನಾರಾಯಣ ಟಿ. ಅಂಚನ್ ಹಾಗೂ ಪರಿಣತ ಮೋನಪ್ಪ ಪೂಜಾರಿ ಅವರನ್ನು ಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲುಂಬಿ, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ರಾಜಾರಾಮ್ ಕೆ.ಬಿ., ವಾಸ್ತು ವಿನ್ಯಾಸಗಾರ ಪ್ರಮಲ್ ಕುಮಾರ್, ನಾರಾಯಣ ಮಚ್ಚಿನ, ರತ್ನಾಕರ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.