ಇಸ್ತಾಂಬುಲ್ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್: ಭಾರತವನ್ನು ಪ್ರತಿನಿಧಿಸಿ ಕಿನ್ನಿಗೋಳಿಯ ಯುವ ಪವರ್‌ಲಿಫ್ಟರ್ ಕೀರ್ತನ್ ಕಟೀಲ್‌ಗೆ ಬೆಳ್ಳಿ ಪದಕ
ಕಿನ್ನಿಗೋಳಿ: ಟರ್ಕಿಯ ಇಸ್ತಾಂಬುಲ್‌ನಲ್ಲಿ ಸೆಪ್ಟೆಂಬರ್ 22ರಂದು ನಡೆದ ಏಷ್ಯನ್ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕಿನ್ನಿಗೋಳಿಯ ಯುವ ಪವರ್‌ಲಿಫ್ಟರ್ ಕೀರ್ತನ್ ಕಟೀಲ್ ಅವರು ಜೂನಿಯರ್ 53 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಸಮರ್ಪಿತ ತರಬೇತಿಯ ಮೂಲಕ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದಿರುವ ಕೀರ್ತನ್ ಅವರ ಸಾಧನೆ ಕಿನ್ನಿಗೋಳಿ ಮಾತ್ರವಲ್ಲದೆ ಕರಾವಳಿ ಭಾಗದ ಕ್ರೀಡಾಭಿಮಾನಿಗಳಲ್ಲಿಯೂ ಸಂತಸ ಮತ್ತು ಹೆಮ್ಮೆ ಮೂಡಿಸಿದೆ.

ಕೀರ್ತನ್ ಕಟೀಲ್ ಅವರು ಚಂದ್ರಹಾಸ ಕುಂದರ್ ಮತ್ತು ನಿರ್ಮಲಾ ದಂಪತಿಯ ಪುತ್ರ. ಅವರು ಕಟೀಲ್‌ನ ಎಸ್‌ಡಿಪಿಟಿಯಲ್ಲಿ ಎಸ್‌ಎಸ್‌ಎಲ್‌ಸಿ, ಎಸ್‌ಡಿಪಿಟಿ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದು, ಪದವಿ ಶಿಕ್ಷಣವನ್ನೂ ಮುಗಿಸಿದ್ದಾರೆ.
ಕಿನ್ನಿಗೋಳಿಯ ASPA Fitnessನಲ್ಲಿ ತರಬೇತಿ ಪಡೆಯುತ್ತಿರುವ ಕೀರ್ತನ್ ಅವರಿಗೆ ಆಶ್ರಿತ್ ಅವರು ತರಬೇತಿ ನೀಡುತ್ತಿದ್ದಾರೆ. ಕೀರ್ತನ್ ಅವರು 2025ರ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿಯೂ 53 ಕೆ.ಜಿ. ಜೂನಿಯರ್ ವಿಭಾಗದ ಬೆಂಚ್ ಪ್ರೆಸ್‌ನಲ್ಲಿ ಚಿನ್ನದ ಪದಕ ಹಾಗೂ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಅಂತರರಾಷ್ಟ್ರೀಯ ವೇದಿಕೆಯಲ್ಲಿ ಬೆಳ್ಳಿ ಪದಕ ಗೆದ್ದು ದೇಶ ಹಾಗೂ ಊರಿಗೆ ಕೀರ್ತಿ ತಂದಿರುವ ಕೀರ್ತನ್ ಕಟೀಲ್ ಅವರ ಸಾಧನೆಗೆ ಕುಟುಂಬಸ್ಥರು, ತರಬೇತುದಾರರು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.