Skip to content
Billava News

ಎರ್ಮಾಳಿನಲ್ಲಿ ಸಂಭ್ರಮದಿಂದ ನಡೆದ ಕಂಡೊಡೊಂಜಿ ದಿನ; ಭೋಜರಾಜ್ ವಾಮಂಜೂರು ಉದ್ಘಾಟನೆ, ದಂಪತಿಗೆ ಸನ್ಮಾನ

ಎರ್ಮಾಳು, ಆ. 2: ಶ್ರೀ ಕುದ್ರೋಟ್ಟು ಬ್ರಹ್ಮ ಬೈದರ್ಕಳ ಗರಡಿ, ಎರ್ಮಾಳು ಆಶ್ರಯದಲ್ಲಿ ಬಡಾ ಕೋಟಿ-ಚೆನ್ನಯ ಯುವ ಬಿಲ್ಲವ ಸಂಘಟನೆ ಹಾಗೂ ಬೈದಶ್ರೀ ಮಹಿಳಾ...

By Billavavani
ಎರ್ಮಾಳಿನಲ್ಲಿ ಸಂಭ್ರಮದಿಂದ ನಡೆದ ಕಂಡೊಡೊಂಜಿ ದಿನ; ಭೋಜರಾಜ್ ವಾಮಂಜೂರು ಉದ್ಘಾಟನೆ, ದಂಪತಿಗೆ ಸನ್ಮಾನ

ಎರ್ಮಾಳು, ಆ. 2: ಶ್ರೀ ಕುದ್ರೋಟ್ಟು ಬ್ರಹ್ಮ ಬೈದರ್ಕಳ ಗರಡಿ, ಎರ್ಮಾಳು ಆಶ್ರಯದಲ್ಲಿ ಬಡಾ ಕೋಟಿ-ಚೆನ್ನಯ ಯುವ ಬಿಲ್ಲವ ಸಂಘಟನೆ ಹಾಗೂ ಬೈದಶ್ರೀ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಕಂಡೊಡೊಂಜಿ ದಿನ ಕಾರ್ಯಕ್ರಮವು ಭಾನುವಾರ ತೆಂಕ ಬಡಾ ಜೋಡುಕರೆ ಕಂಬಳ ಗದ್ದೆಯಲ್ಲಿ ಭಕ್ತಿಭಾವ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಸಮಾಜಸೇವಕ ಭೋಜರಾಜ್ ವಾಮಂಜೂರು ಅವರು ಉದ್ಘಾಟಿಸಿ, ತುಳುನಾಡಿನ ಸಂಪ್ರದಾಯ, ಸಂಸ್ಕೃತಿ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಒತ್ತಿಹೇಳಿದರು.

1001108227.jpg

ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಭೋಜರಾಜ್ ವಾಮಂಜೂರು ಹಾಗೂ ಅವರ ಧರ್ಮಪತ್ನಿಯನ್ನು ಸಂಘಟನೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಂಡೊಡೊಂಜಿ ದಿನದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಸ್ಥಳೀಯರು, ಸಂಘಟನೆಯ ಪದಾಧಿಕಾರಿಗಳು, ಮಹಿಳಾ ಮಂಡಳಿಯ ಸದಸ್ಯೆಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

1001108225.jpg