Skip to content
Billava News

ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ವತಿಯಿಂದ ದೈವದಶಕಂ ಪ್ರಾರ್ಥನೆಯ ಕನ್ನಡ ಕಲಿಕಾ ತರಗತಿ

ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ವರಚಿಸಿದ ಹಾಗೂ ಜಗತ್ತಿನ ಸುಮಾರು 150 ಭಾಷೆಗಳಿಗೆ ಅನುವಾದಗೊಂಡಿರುವ ‘ದೈವದಶಕಂ’ ಪ್ರಾರ್ಥನೆಯನ್ನು ಗುರುದೇವರ ಅನುಯಾಯಿಗಳಿಗೆ ಸರಳವಾಗಿ...

By Billavavani
ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ವತಿಯಿಂದ ದೈವದಶಕಂ ಪ್ರಾರ್ಥನೆಯ ಕನ್ನಡ ಕಲಿಕಾ ತರಗತಿ

ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ವರಚಿಸಿದ ಹಾಗೂ ಜಗತ್ತಿನ ಸುಮಾರು 150 ಭಾಷೆಗಳಿಗೆ ಅನುವಾದಗೊಂಡಿರುವ ‘ದೈವದಶಕಂ’ ಪ್ರಾರ್ಥನೆಯನ್ನು ಗುರುದೇವರ ಅನುಯಾಯಿಗಳಿಗೆ ಸರಳವಾಗಿ ಕನ್ನಡದಲ್ಲಿ ಕಲಿಸಿಕೊಡುವ ಉದ್ದೇಶದಿಂದ ವಿಶೇಷ ಕನ್ನಡ ಕಲಿಕಾ ತರಗತಿಯನ್ನು ಆಯೋಜಿಸಲಾಗಿದೆ.

ಶಿವಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರಿಂದ ‘ಗಾನಕೋಗಿಲೆ ಕನ್ನಡದ ಸಿ.ಕೆ. ರೇವಮ್ಮ’ ಎಂಬ ಬಿರುದು ಪಡೆದಿರುವ ಕುಮಾರಿ ಶ್ರೀರಕ್ಷಾ ಎಸ್. ಎಚ್. ಪೂಜಾರಿ ಅವರು ದೈವದಶಕಂ ಪ್ರಾರ್ಥನೆಯ ಗಾಯನ ಹಾಗೂ ಪಠಣವನ್ನು ಸರಳ ರೀತಿಯಲ್ಲಿ ಕಲಿಸಿಕೊಡಲಿದ್ದಾರೆ.

ದಿನಾಂಕ: ಸೆಪ್ಟೆಂಬರ್ 13, 2026, ಭಾನುವಾರ

⏰ ಸಮಯ: ಬೆಳಿಗ್ಗೆ 11.00ರಿಂದ ಮಧ್ಯಾಹ್ನ 12.00ರವರೆಗೆ

📍 ಸ್ಥಳ: ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಕಚೇರಿ, ಕೊಟ್ಟಾರ ಚೌಕಿ, ಮಂಗಳೂರು.

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 96200 13221