ಕಾರ್ಕಳ: ಹಾಡಿ ಗರಡಿಯಲ್ಲಿ ಸುತ್ತು ಪೌಳಿಯ ನವೀಕರಣಕ್ಕೆ ಸಂಕಲ್ಪ ಕಾರ್ಯಕ್ರಮ
ಕಾರ್ಕಳ: ಮೂರುಾರು ಗ್ರಾಮದ ಹಿರ್ಗಾನದಲ್ಲಿರುವ ಹಾಡಿ ಮೂಲ ಗರಡಿ ಶ್ರೀ ಬ್ರಹ್ಮ ಬೈದರ್ಕಳ ಮಾಯಂದಲ ದೇವಿ ಸನ್ನಿಧಿಯ ಶಿಥಿಲಾವಸ್ಥೆಯಲ್ಲಿರುವ ಗರಡಿಯ ನಾಲ್ಕು ಸುತ್ತಿನ ಸುತ್ತು ಪೌಳಿಯ ನವೀಕರಣ ಕಾರ್ಯಕ್ಕೆ ಸಂಕಲ್ಪ ಕಾರ್ಯಕ್ರಮವು ಸೆಪ್ಟೆಂಬರ್ 20ರಂದು ಭಾನುವಾರ ಶ್ರೀ ಕ್ಷೇತ್ರದ ಗಣ್ಯರು ಹಾಗೂ ಭಕ್ತರ ಸಮಾಗಮದೊಂದಿಗೆ ನೆರವೇರಿತು.

ಶ್ರೀ ಕ್ಷೇತ್ರದ ಶಕ್ತಿಗಳ ಮೇರೆಗೆ ಕೈಗೊಳ್ಳಲಾಗುತ್ತಿರುವ ಈ ನವೀಕರಣ ಕಾರ್ಯದ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸ್ತುಶಿಲ್ಪ ತಜ್ಞ ಪ್ರಮಲ್ ಕುಮಾರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸಿದ್ದರು. ಬೆಂಗಳೂರು ಮೂಲದ ಡಾ. ಸುಬ್ರಮಣ್ಯಂ ಶರ್ಮ ಅವರು ಉಪಸ್ಥಿತರಿದ್ದರು. ಅವರು ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಹಾಗೂ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಅವರ ಮೊಮ್ಮಗ ಎಂದು ತಿಳಿಸಲಾಯಿತು.

ಶ್ರೀ ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಸದಾನಂದ ಪೂಜಾರಿ, ಶ್ರೀಕಾಂತ್ ಭಟ್ ಕಾನಂಗಿ, ಹಾಡಿ ಗರಡಿ ಮನೆಯ ಕೃಷ್ಣಪ್ಪ ಪೂಜಾರಿ, ಶಶಿಕಾಂತ್ ಭಟ್ ಕಾನಂಗಿ ಹಾಗೂ ಸರ್ವೋತ್ತಮ ಕಡಂಬ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ರೋಹಿತ್ ನಿರೂಪಿಸಿದರು. ಡಾ. ಸಂತೋಷ್ ಪೂಜಾರಿ ಕಾರ್ಯಕ್ರಮವನ್ನು ನೆರವೇರಿಸಿದರು.
ಶ್ರೀ ಕ್ಷೇತ್ರದ ಪವಿತ್ರ ಪರಂಪರೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಉಳಿಸಿಕೊಂಡು ಹೋಗುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಸುತ್ತು ಪೌಳಿಯ ನವೀಕರಣ ಕಾರ್ಯಕ್ಕೆ ಭಕ್ತರು ಹಾಗೂ ಗಣ್ಯರು ಶುಭಹಾರೈಸಿದರು.