ತೋಟಗಾರಿಕೆ ಇಲಾಖೆಯಲ್ಲಿ 85 ಹುದ್ದೆಗಳ ನೇಮಕಾತಿ: ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ
ತೋಟಗಾರಿಕೆ ಇಲಾಖೆಯಲ್ಲಿ 85 ಹುದ್ದೆಗಳ ನೇಮಕಾತಿ: ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಒಟ್ಟು 85 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ 05+05 ಸಹಾಯಕ ತೋಟಗಾರಿಕಾ ನಿರ್ದೇಶಕರು ಹಾಗೂ 75 ಸಹಾಯಕ ತೋಟಗಾರಿಕಾ ಅಧಿಕಾರಿಗಳು ಸೇರಿದಂತೆ ಒಟ್ಟು 85 ಹುದ್ದೆಗಳು ಭರ್ತಿಯಾಗಲಿವೆ.
ಶೈಕ್ಷಣಿಕ ಅರ್ಹತೆ:
B.Sc (Horticulture)
PG in Horticulture
ವಯೋಮಿತಿ:
ಕನಿಷ್ಠ: 18 ವರ್ಷ
ಗರಿಷ್ಠ: 40 ವರ್ಷ
OBC ಅಭ್ಯರ್ಥಿಗಳಿಗೆ: 43 ವರ್ಷ
SC/ST ಹಾಗೂ Category-1 ಅಭ್ಯರ್ಥಿಗಳಿಗೆ: 45 ವರ್ಷ
ಅರ್ಜಿ ಸಲ್ಲಿಕೆ ಅವಧಿ:
ಆರಂಭ: 05 ಆಗಸ್ಟ್ 2026
ಕೊನೆಯ ದಿನಾಂಕ: 30 ಆಗಸ್ಟ್ 2026
ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಮೀಸಲಾತಿ ಹಾಗೂ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ ನಂತರವೇ ಅರ್ಜಿ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್:
