Skip to content
Billava News

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಕೇರಳದ ಅಬಕಾರಿ ಸಚಿವ ಎಂ. ಲಿಜು ಭೇಟಿ

ಮಂಗಳೂರು: ಕೇರಳ ರಾಜ್ಯದ ಅಬಕಾರಿ ಸಚಿವರಾದ ಶ್ರೀ ಎಂ. ಲಿಜು ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

By Billavavani
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಕೇರಳದ ಅಬಕಾರಿ ಸಚಿವ ಎಂ. ಲಿಜು ಭೇಟಿ

ಮಂಗಳೂರು: ಕೇರಳ ರಾಜ್ಯದ ಅಬಕಾರಿ ಸಚಿವರಾದ ಶ್ರೀ ಎಂ. ಲಿಜು ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

WhatsApp Image 2026-10-23 at 5.16.39 PM.jpeg

ಕೇರಳ ವಿಧಾನಸಭಾ ಚುನಾವಣೆಗೆ ಮುನ್ನವೂ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದ ಅವರು, ಸಚಿವರಾದ ಬಳಿಕ ಮತ್ತೊಮ್ಮೆ ದೇವಸ್ಥಾನಕ್ಕೆ ಆಗಮಿಸಿ ಶ್ರೀ ನಾರಾಯಣ ಗುರುದೇವರ ದರ್ಶನ ಪಡೆದು ಧನ್ಯತೆಯನ್ನು ವ್ಯಕ್ತಪಡಿಸಿದರು.

WhatsApp Image 2026-10-23 at 5.17.50 PM.jpeg

ಶ್ರೀ ನಾರಾಯಣ ಗುರುದೇವರಿಂದ ಸ್ಥಾಪಿಸಲ್ಪಟ್ಟ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನವು ಸರ್ವಸಮಾನತೆ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿರುವುದು ಸಂತೋಷ ತಂದಿದೆ ಎಂದು ಅವರು ತಿಳಿಸಿದರು.

WhatsApp Image 2026-10-23 at 5.42.17 PM.jpeg

ದೇವಸ್ಥಾನದ ಆಡಳಿತ ಮತ್ತು ನಿರ್ವಹಣೆಯು ಶ್ರೀ ನಾರಾಯಣ ಗುರುದೇವರ ಆದರ್ಶ ಹಾಗೂ ತತ್ವಗಳಿಗೆ ಅನುಗುಣವಾಗಿ ನಡೆಯುತ್ತಿರುವುದು ಅತ್ಯಂತ ಮಹತ್ವದ ಸಂಗತಿ ಎಂದು ಅವರು ಪ್ರಶಂಸಿಸಿದರು.