ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಧ್ವಜಸ್ತಂಭದ ಪುನಃ ಪ್ರತಿಷ್ಠಾಪನಾ ಮಹೋತ್ಸವ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಧ್ವಜಸ್ತಂಭದ ಪುನಃ ಪ್ರತಿಷ್ಠಾಪನಾ ಮಹೋತ್ಸವವು ವೈದಿಕ ವಿಧಿ-ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಧ್ವಜಸ್ತಂಭದ ಪುನಃ ಪ್ರತಿಷ್ಠಾಪನಾ ಮಹೋತ್ಸವವು ವೈದಿಕ ವಿಧಿ-ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಮಂಗಳವಾರ ಸಂಜೆ ಶ್ರೀ ಗುರು ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಿಂಬ ಪರಿಗ್ರಹ, ಬಿಂಬ ಶುದ್ಧಿ, ಶಯ್ಯಾಧಿವಾಸ ಹಾಗೂ ಪಂಚವಿಂಶತಿ ಕಲಶ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಬುಧವಾರ ಬೆಳಗ್ಗೆ ಶ್ರೀ ಗುರು ಪ್ರಾರ್ಥನೆ, ಮಹಾಗಣಪತಿ ಹೋಮ, ಪ್ರತಿಷ್ಠಾಪನಾ ಹೋಮ ಹಾಗೂ ಅನುಜ್ಞಾ ಪ್ರಾರ್ಥನೆ ನೆರವೇರಿದ ಬಳಿಕ ಶ್ರೀ ನಂದಿ ಪ್ರತಿಷ್ಠೆ, ಪವಿತ್ರ ಕಲಶಾಭಿಷೇಕ, ಧ್ವಜಾರೋಹಣ (ಕೊಡಿ ಏರುವಿಕೆ) ಮತ್ತು ಧ್ವಜ ಪೂಜೆ ನಡೆಯಿತು.

ವೈದಿಕ ಸಂಪ್ರದಾಯದಂತೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಶ್ರೀ ಗೋಕರ್ಣನಾಥ ದೇವರ ಕೃಪೆಗೆ ಪಾತ್ರರಾದರು.
