Skip to content
Billava News

ಏಜೆಂಟಿಕ್ AI ಮಾಸ್ಟರ್ ಕ್ಲಾಸ್‌ಗೆ ಚಾಲನೆ; ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇದರ ಅಂಗ ಸಂಸ್ಥೆ Spark Billava ತಂಡದ ಮಹತ್ವದ ಕಾರ್ಯಕ್ರಮ

ಬೆಂಗಳೂರು: ಬಿಲ್ಲವ ಅಸೋಸಿಯೇಷನ್ ಬೆಂಗಳೂರು (R) ವತಿಯಿಂದ ಆಯೋಜಿಸಲಾದ ಜಂಟಿ ಸಭೆಯಲ್ಲಿ ಏಜೆಂಟಿಕ್ AI ಮಾಸ್ಟರ್ ಕ್ಲಾಸ್ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಶ್ರೀ ಎಂ. ವೇದಕುಮಾರ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.

By Billavavani
ಏಜೆಂಟಿಕ್ AI ಮಾಸ್ಟರ್ ಕ್ಲಾಸ್‌ಗೆ ಚಾಲನೆ; ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇದರ ಅಂಗ ಸಂಸ್ಥೆ Spark Billava ತಂಡದ  ಮಹತ್ವದ ಕಾರ್ಯಕ್ರಮ

ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ AI ಕೌಶಲ್ಯಗಳ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು, ಯುವಕರು ಹಾಗೂ ಈಗಾಗಲೇ ಉದ್ಯೋಗದಲ್ಲಿರುವ ವೃತ್ತಿಪರರಿಗೆ AI ಕುರಿತು ಅರಿವು ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ SPARK Billava ತಂಡ ಈ ಮಹತ್ವದ ಕಾರ್ಯಕ್ರಮವನ್ನು ರೂಪಿಸಿದೆ.

WhatsApp Image 2026-08-16 at 1.21.24 PM.jpeg

Microsoft Singaporeನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ಲವ ಸಮುದಾಯದ ಯುವಕರ ಪ್ರಯತ್ನ ಈ ಕಾರ್ಯಕ್ರಮದ ಪ್ರಮುಖ ಪ್ರೇರಣೆಯಾಗಿದೆ. ಸಮುದಾಯದ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಈ ಅವಕಾಶವನ್ನು ಬಳಸಿಕೊಂಡು AI ತಂತ್ರಜ್ಞಾನದ ಬಗ್ಗೆ ಕಲಿಯಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಉದ್ಯೋಗ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ Artificial Intelligence ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ AI ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ಕಲಿಯಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.

3.jpeg

ಈ ಮಾಸ್ಟರ್ ಕ್ಲಾಸ್‌ನ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಎಲ್ಲಾ ಬಿಲ್ಲವ ಸಮುದಾಯದ ಗ್ರೂಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಂದಣಿ ಲಿಂಕ್ ಹಂಚಿಕೊಳ್ಳುವಂತೆ ಮನವಿ ಮಾಡಲಾಗಿದೆ.

ನೋಂದಣಿಗಾಗಿ:

https://forms.gle/aGyo24kAHotEYGQv8

AI ಕೌಶಲ್ಯ ಕಲಿಯಿರಿ – ಭವಿಷ್ಯಕ್ಕೆ ಸಿದ್ಧರಾಗಿ.

1111.jpeg


333.jpeg