ಶ್ರೀ ಎಲ್.ವಿ. ಅಮೀನ್ ಅವರ 75ನೇ ಜನ್ಮದಿನ: 'ಲೋಕ ಸೇವಕ ಎಲ್.ವಿ. ಅಮೀನ್' ಗೌರವ ಗ್ರಂಥ ಪ್ರಕಟಣೆ ಸಮಾಜಸೇವೆಗೆ ಸಂದ ಗೌರವ
ಬಜ್ಪೆ: ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈನ ಹೆಸರಾಂತ ಉದ್ಯಮಿ, ಸಮಾಜ ಸಂಘಟಕ ಹಾಗೂ ಬಜ್ಪೆ ದೊಡ್ಡಿಕಟ್ಟ ಮನೆತನದ ಹೆಮ್ಮೆಯ ಪುತ್ರರಾದ ಶ್ರೀ ಎಲ್.ವಿ. ಅಮೀನ್ ಅವರ ಜೀವನ ಸಾಧನೆಯನ್ನು ಆಧರಿಸಿದ "ಲೋಕ ಸೇವಕ ಎಲ್.ವಿ. ಅಮೀನ್" ಗೌರವ ಗ್ರಂಥವನ್ನು ಮುಂಬೈ ...

ಬಜ್ಪೆ: ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈನ ಹೆಸರಾಂತ ಉದ್ಯಮಿ, ಸಮಾಜ ಸಂಘಟಕ ಹಾಗೂ ಬಜ್ಪೆ ದೊಡ್ಡಿಕಟ್ಟ ಮನೆತನದ ಹೆಮ್ಮೆಯ ಪುತ್ರರಾದ ಶ್ರೀ ಎಲ್.ವಿ. ಅಮೀನ್ ಅವರ ಜೀವನ ಸಾಧನೆಯನ್ನು ಆಧರಿಸಿದ "ಲೋಕ ಸೇವಕ ಎಲ್.ವಿ. ಅಮೀನ್" ಗೌರವ ಗ್ರಂಥವನ್ನು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಕಟಿಸಿದ್ದು, ಅವರ ಸಮಾಜಮುಖಿ ಸೇವೆಗೆ ಸಂದ ಮಹತ್ವದ ಗೌರವವಾಗಿದೆ.

ಮುಂಬೈ ನಗರದಲ್ಲಿ ಮಾತ್ರವಲ್ಲದೆ, ತಮ್ಮ ಹುಟ್ಟೂರಿನ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ಶ್ರೀ ಅಮೀನ್ ಅವರು ನೀಡಿರುವ ಅಮೂಲ್ಯ ಕೊಡುಗೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.), ಬಜ್ಪೆ–ಕರಂಬಾರು ಇದರ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರಾಗಿ ಅವರು ಸಲ್ಲಿಸುತ್ತಿರುವ ಸೇವೆ ಸಮಾಜಕ್ಕೆ ಮಾರ್ಗದರ್ಶಕವಾಗಿದೆ.

ಇದೇ ವೇಳೆ ಯುವವಾಹಿನಿ (ರಿ.), ಬಜ್ಪೆ ಘಟಕದ ಚಟುವಟಿಕೆಗಳಿಗೆ ಅವರು ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಆಶೀರ್ವಾದ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಎಲ್.ವಿ. ಅಮೀನ್ ಅವರು ತಮ್ಮ ಜೀವನದ 75ನೇ ವಸಂತಕ್ಕೆ ಪಾದಾರ್ಪಣೆಗೈದಿರುವ ಶುಭ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.), ಬಜ್ಪೆ–ಕರಂಬಾರು ಹಾಗೂ ಯುವವಾಹಿನಿ (ರಿ.), ಬಜ್ಪೆ ಘಟಕದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

