Skip to content
Billava News

ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ ನಡೆದ “ಮಾಧವ ಕೀರ್ತನೋತ್ಸವ-2026” ಅಂತರ್ ಘಟಕ ಭಜನಾ ಸ್ಪರ್ಧೆ

ಮಂಗಳೂರು, ಆ. 23: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ ನಡೆದ “ಮಾಧವ ಕೀರ್ತನೋತ್ಸವ-2026” ಅಂತರ್ ಘಟಕ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭವು ಆ.23ರಂದು ಸಂಜೆ ನಡೆಯಿತು.

By Billavavani
ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ ನಡೆದ “ಮಾಧವ ಕೀರ್ತನೋತ್ಸವ-2026” ಅಂತರ್ ಘಟಕ ಭಜನಾ ಸ್ಪರ್ಧೆ

ಮಂಗಳೂರು, ಆ. 23: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ ನಡೆದ “ಮಾಧವ ಕೀರ್ತನೋತ್ಸವ-2026” ಅಂತರ್ ಘಟಕ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭವು ಆ.23ರಂದು ಸಂಜೆ ನಡೆಯಿತು.

1.jpeg

ಸಂಜೆ 5.30ಕ್ಕೆ ಆರಂಭಗೊಂಡ ಸಮಾರಂಭದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಖಾ ಗೋಪಾಲ್ ಅವರು ಸ್ವಾಗತಿಸಿ, ಗಣ್ಯರು ಹಾಗೂ ಪದಾಧಿಕಾರಿಗಳನ್ನು ಬರಮಾಡಿಕೊಂಡರು.

4.jpeg

ಶ್ರೀ ಸುರೇಶ್ ಪೂಜಾರಿ, ಪಣಂಬೂರು ಅವರು “ಮಾಧವ ಕೀರ್ತನೋತ್ಸವ”ದ ಪ್ರಸ್ತಾವನೆ ಮಂಡಿಸಿ, ಭಜನಾ ಪರಂಪರೆಯ ಮಹತ್ವ ಹಾಗೂ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ “ಮಾಧವ ಕೀರ್ತನೋತ್ಸವ ಪ್ರಶಸ್ತಿ”ಗೆ ಆಯ್ಕೆಯಾದ ಶ್ರೀ ವಿಜಯ ಕುಕ್ಯಾನ್ ಅವರನ್ನು ಪರಿಚಯಿಸಲಾಯಿತು. ಪಣಂಬೂರು–ಕುಳಾಯಿ ಘಟಕದ ಮಾಜಿ ಅಧ್ಯಕ್ಷೆ ಶ್ರೀಮತಿ ಮನೀಷಾ ರೂಪೇಶ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಮಾಡಿದರು. ಬಳಿಕ ಉದ್ಯಮಿ ಶ್ರೀ ಶೈಲೇಂದ್ರ ವೈ. ಸುವರ್ಣ ಅವರು ಶ್ರೀ ವಿಜಯ ಕುಕ್ಯಾನ್ ಅವರಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಶ್ರೀ ವಿಜಯ ಕುಕ್ಯಾನ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

cccccccccccc.jpeg

ಕಾರ್ಯಕ್ರಮದ ಆತಿಥಿಗಳಾದ ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು ಇದರ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್. ಪೂಜಾರಿ, ಉದ್ಯಮಿ ಶ್ರೀ ಶೈಲೇಂದ್ರ ವೈ. ಸುವರ್ಣ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪ್ರಭಾರ) ಶ್ರೀ ಮಿಥುನ್ ಅವರು ಮಾತನಾಡಿ, ಯುವವಾಹಿನಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿದರು.

z.jpeg

ಶ್ರೀ ಮಾಧವ ಅಂಚನ್ ಅವರಿಗೆ ಈ ಸಂದರ್ಭದಲ್ಲಿ ಗೌರವ ಅಭಿನಂದನೆ ಸಲ್ಲಿಸಲಾಯಿತು.

ಭಜನಾ ಸ್ಪರ್ಧೆಯ ತೀರ್ಪುಗಾರರಾದ ಶ್ರೀಮತಿ ಗುಣವತಿ ಸೋಮೇಶ್ವರ, ಶ್ರೀ ಸೋಮಶೇಖರ ಮಯ್ಯ ಹಾಗೂ ಶ್ರೀ ಶುಭಕರ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಅವರ ಪರಿಚಯವನ್ನು ಕ್ರಮವಾಗಿ ಶ್ರೀ ಸತೀಶ್ ಕಿಲ್ಪಾಡಿ, ಶ್ರೀಮತಿ ವಿದ್ಯಾ ರಾಕೇಶ್ ಹಾಗೂ ಶ್ರೀಮತಿ ಸುಧಾ ಸುರೇಶ್ ಅವರು ವಾಚಿಸಿದರು. ತೀರ್ಪುಗಾರರ ಪೈಕಿ ಓರ್ವರು ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳ ಪ್ರದರ್ಶನವನ್ನು ಪ್ರಶಂಸಿಸಿದರು.

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಅವರು ಅಧ್ಯಕ್ಷೀಯ ಮಾತುಗಳನ್ನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಸ್ಪರ್ಧೆಯಲ್ಲಿ ಯುವವಾಹಿನಿಯ ಒಟ್ಟು 22 ಘಟಕಗಳು ಭಾಗವಹಿಸಿದ್ದವು. “ಮಾಧವ ಕೀರ್ತನೋತ್ಸವ-2026” ಅಂತರ್ ಘಟಕ ಭಜನಾ ಸ್ಪರ್ಧೆಯಲ್ಲಿ ಬಂಟ್ವಾಳ ಘಟಕ ಪ್ರಥಮ, ಗ್ರಾಮ ಚಾವಡಿ ಕೊಣಾಜೆ ಘಟಕ ದ್ವಿತೀಯ ಹಾಗೂ ಸುರತ್ಕಲ್ ಘಟಕ ತೃತೀಯ ಬಹುಮಾನ ಪಡೆದುಕೊಂಡವು.

ತೀರ್ಪುಗಾರರ ಮೆಚ್ಚುಗೆ: ಕಾರ್ಕಳ ಮತ್ತು ಕೂಳೂರು ಘಟಕಗಳು

ಅತ್ಯುತ್ತಮ ಶಿಸ್ತು ಪಾಲನೆ: ಕಾರ್ಕಳ ಘಟಕ

ಉತ್ತಮ ಭಜಕ: ಕಡಬ ಘಟಕ

ಉತ್ತಮ ಭಜಕಿ: ಬಂಟ್ವಾಳ ಘಟಕ

ಅತ್ಯುತ್ತಮ ತಬಲ ವಾದನ: ಮೂಡುಬಿದ್ರೆ ಘಟಕ

ಅತ್ಯುತ್ತಮ ಹಾರ್ಮೋನಿಯಂ ವಾದನ: ಬಂಟ್ವಾಳ ಘಟಕ

ಕಾರ್ಯಕ್ರಮದ ಕೊನೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಕಲೆ ಮತ್ತು ಸಾಹಿತ್ಯ ನಿರ್ದೇಶಕ ಶ್ರೀ ರಂಜನ್ ಕೆ. ಕೋಟ್ಯಾನ್ ಅವರು ಧನ್ಯವಾದ ಸಮರ್ಪಿಸಿದರು. ಭಕ್ತಿ, ಸಂಗೀತ, ಸಂಸ್ಕೃತಿ ಹಾಗೂ ಸಂಘಟನಾ ಒಗ್ಗಟ್ಟಿನ ಸಮ್ಮಿಲನವಾಗಿ ಮೂಡಿಬಂದ “ಮಾಧವ ಕೀರ್ತನೋತ್ಸವ-2026” ಭಜನಾ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

WhatsApp Image 2026-09-01 at 2.44.37 PM.jpeg