Skip to content
Billava News

ವಿನೂತನ ದರ್ಬಾರು ಮಂಟಪ, ಹೊಸ ಆಕರ್ಷಣೆಗಳೊಂದಿಗೆ ಈ ಬಾರಿ ವೈಭವದ ಮಂಗಳೂರು ದಸರಾ: ಪದ್ಮರಾಜ್ ಆರ್, ಕೋಶಾಧಿಕಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ

ಮಂಗಳೂರು: ಮಂಗಳೂರು ದಸರಾ ಈ ಬಾರಿ ಮತ್ತಷ್ಟು ವೈಭವ ಮತ್ತು ವಿನೂತನತೆಯೊಂದಿಗೆ ನಡೆಯಲಿದೆ. ವಿಶೇಷವಾಗಿ ವಿನೂತನ ಶೈಲಿಯ ದರ್ಬಾರು ಮಂಟಪ ಸೇರಿದಂತೆ ಹಲವು ಹೊಸ ಆಕರ್ಷಣೆಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಉತ್ಸವದ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

By Billavavani

ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗಳೂರು ದಸರಾ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಮಂಗಳೂರು ದಸರಾದಲ್ಲಿ ಪೂಜೆಗೊಳ್ಳಲಿರುವ ಮಹಾಗಣಪತಿ, ಆದಿಶಕ್ತಿ, ನವದುರ್ಗೆ ಹಾಗೂ ಶಾರದೆ ಮೂರ್ತಿಗಳ ರಚನೆಗೆ ಈಗಾಗಲೇ ಮುಹೂರ್ತ ನೆರವೇರಿಸಲಾಗಿದೆ. ದಸರಾವನ್ನು ಈ ಬಾರಿಯೂ ವೈಭವೋಪೇತವಾಗಿ ನಡೆಸಲು ಆಡಳಿತ ಸಮಿತಿ ನಿರ್ಧರಿಸಿದ್ದು, ಅ.11ರಂದು ಆರಂಭವಾಗುವ ದಸರಾ ವೈಭವ ಅ.22ರವರೆಗೆ ನಡೆಯಲಿದೆ.

WhatsApp Image 2026-09-21 at 8.03.54 AM (1).jpeg

ದಸರಾ ಅವಧಿಯಲ್ಲಿ ಪ್ರತಿನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಅನ್ನದಾನವೂ ನಡೆಯಲಿದೆ. ಉತ್ಸವದ ವಿವಿಧ ವ್ಯವಸ್ಥೆಗಳ ನಿರ್ವಹಣೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಪದ್ಮರಾಜ್ ತಿಳಿಸಿದರು.

ಅ.12ರಂದು ಸಿಎಂರಿಂದ ದಸರಾ ಉದ್ಘಾಟನೆ

ವೈಭವದ ಮಂಗಳೂರು ದಸರಾ ಮಹೋತ್ಸವವನ್ನು ಅ.12ರಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿರುವರು ಎಂದು ಪದ್ಮರಾಜ್ ಹೇಳಿದರು.

ಹಲವು ಸ್ಪರ್ಧೆಗಳಿಗೆ ವೇದಿಕೆ

ಈ ಬಾರಿಯ ಮಂಗಳೂರು ದಸರಾ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಕ್ಷರಾಭ್ಯಾಸ, ಮೆಹಂದಿ, ರಂಗೋಲಿ, ಕಿನ್ನಿ ಪಿಲಿ ಕುಣಿತ, ಹೂಮಾಲೆ ಕಟ್ಟುವಿಕೆ, ಬೆಂಕಿರಹಿತ ಅಡುಗೆ, ಆಂಗಿಕಂ ಹಾಗೂ ಜನಪದ ಸಮೂಹ ಗಾಯನ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಪೂರ್ವ ಸಿದ್ಧತಾ ಸಭೆ

ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರ್ ವಹಿಸಿದ್ದರು. ಅಭಿವೃದ್ಧಿ ಸಮಿತಿ ಸದಸ್ಯರಾದ ಚಿತ್ತರಂಜನ್ ಗರೋಡಿ ಹಾಗೂ ಹರಿಕೃಷ್ಣ ಬಂಟ್ವಾಳ್ ದಸರಾ ಆಯೋಜನೆ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕೃತಿನ್ ಡಿ. ಅಮೀನ್, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ಶೈಲೇಂದ್ರ ವೈ. ಸುವರ್ಣ, ರಾಧಾಕೃಷ್ಣ, ಜತಿನ್ ಅತ್ತಾವರ್, ರಮಾನಾಥ ಕಾರಂದೂರು, ಗೌರವಿ ರಾಜಶೇಖರ್, ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್, ಲತೀಶ್ ಎಂ. ಸುವರ್ಣ ಹಾಗೂ ವಾಸುದೇವ ಕೋಟ್ಯಾನ್ ಉಪಸ್ಥಿತರಿದ್ದರು. ಕುಸುಮಾಕರ್ ಕಾರ್ಯಕ್ರಮ ನಿರೂಪಿಸಿದರು.