Skip to content
Billava News

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಯ ನಿರ್ಮಿಸಿದ ಬಂಟ್ವಾಳದ ಸರಪಾಡಿ ಯುವಕ ಮಯೂರ್, ವಾಲಿಬಾಲ್ ಹಿಡಿದು ಹ್ಯಾಂಡ್‌ಸ್ಟ್ಯಾಂಡ್

ಬಂಟ್ವಾಳ: ಕಾಲುಗಳ ಮಧ್ಯೆ ವಾಲಿಬಾಲ್ ಹಿಡಿದುಕೊಂಡು ಹ್ಯಾಂಡ್‌ಸ್ಟ್ಯಾಂಡ್‌ನಲ್ಲೇ 10 ಮೀಟರ್ ದೂರವನ್ನು ಕೇವಲ 8.60 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಸರಪಾಡಿಯ ಯುವಕ ಮಯೂರ್ ಅವರು ಅಪೂರ್ವ ಸಾಧನೆ ಮಾಡಿದ್ದಾರೆ.

By Billavavani

2026ರ ಜೂನ್ 28ರಂದು ಈ ಸಾಹಸ ಪ್ರದರ್ಶಿಸಿದ ಮಯೂರ್, 10 ಮೀಟರ್ ಹ್ಯಾಂಡ್‌ಸ್ಟ್ಯಾಂಡ್ ವಾಕ್ ಅನ್ನು 08 ಸೆಕೆಂಡ್ 60 ಸೆಂಟಿಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಈ ವಿಭಾಗದಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಯ ನಿರ್ಮಿಸಿರುವುದಾಗಿ ತಿಳಿಸಲಾಗಿದೆ.

ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಅಲ್ಲಿಪಾದೆ ಅಂಚೆಯ ಉಜಿರಾಡಿ ಮನೆಯ ಮಯೂರ್ ಅವರು ದೇವದಾಸ್ ಮತ್ತು ಇಂದಿರಾ ದಂಪತಿಯ ಪುತ್ರ. ಮಂಗಳೂರಿನ ಕಾರ್‌ಸ್ಟ್ರೀಟ್‌ನ ಡಾ. ಪಿ. ದಯಾನಂದ ಪೈ–ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಪೂರ್ಣಗೊಳಿಸಿರುವ ಅವರು, ಪ್ರಸ್ತುತ ಬೈಕಂಪಾಡಿ ರಾಸಾಯನಿಕ ಕೈಗಾರಿಕೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಹ್ಯಾಂಡ್‌ಸ್ಟ್ಯಾಂಡ್‌ನಲ್ಲಿ ದೇಹದ ಸಮತೋಲನ ಕಾಯ್ದುಕೊಂಡು, ಅದರೊಂದಿಗೆ ವಾಲಿಬಾಲ್ ಅನ್ನು ಕಾಲುಗಳ ಮಧ್ಯೆ ಹಿಡಿದುಕೊಂಡೇ ವೇಗವಾಗಿ ಸಾಗುವುದು ಅತ್ಯಂತ ಕಠಿಣ ಸಾಹಸವಾಗಿದೆ. ನಿರಂತರ ಅಭ್ಯಾಸ, ದೈಹಿಕ ಸಾಮರ್ಥ್ಯ, ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಮಯೂರ್ ಈ ಸಾಧನೆ ಮಾಡಿದ್ದಾರೆ.

ಮಯೂರ್ ಅವರ ಈ ವಿಶಿಷ್ಟ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಸರಪಾಡಿ ಗ್ರಾಮ ಮತ್ತು ಬಂಟ್ವಾಳ ತಾಲೂಕಿಗೆ ಹೆಮ್ಮೆಯ ಕ್ಷಣವಾಗಿದೆ.