Skip to content
Tulunadu Special

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ; ನವೀನ್ ಡಿ ಪಡೀಲ್ ಅಭಿನಯದ ಹಾಗು ಶಿವಧ್ವಜ್ ಶೆಟ್ಟಿ ನಿರ್ಮಾಣದ ಇಂಬು ತುಳು ಸಿನಿಮಾ ಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ

‘ಇಂಬು’ ಚಿತ್ರವು ತುಳು ಚಿತ್ರರಂಗಕ್ಕೆ ಮತ್ತೊಂದು ಗರಿಮೆಯನ್ನು ತಂದಿದೆ. ಶಿವಧ್ವಜ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸಂತೋಷ್ ಪೂಜಾರಿ ವೇಣೂರು

By Billavavani
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ; ನವೀನ್ ಡಿ ಪಡೀಲ್ ಅಭಿನಯದ ಹಾಗು ಶಿವಧ್ವಜ್ ಶೆಟ್ಟಿ ನಿರ್ಮಾಣದ ಇಂಬು ತುಳು ಸಿನಿಮಾ ಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ತುಳು ಭಾಷೆಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡ ‘ಇಂಬು’ ಚಿತ್ರವು ತುಳು ಚಿತ್ರರಂಗಕ್ಕೆ ಮತ್ತೊಂದು ಗರಿಮೆಯನ್ನು ತಂದಿದೆ. ಶಿವಧ್ವಜ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟ ನವೀನ್ ಡಿ ಪಡೀಲ್ ಹಾಗು ನಿರ್ದೇಶನ ಸಂತೋಷ್ ಪೂಜಾರಿ ವೇಣೂರು ಸೇರಿದಂತೆ ಹಲವರ ಶ್ರಮ ಫಲಿಸಿದ್ದು, ಪ್ರಶಸ್ತಿ ಗೆಲುವಿಗೆ ಚಿತ್ರತಂಡಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿವೆ.

ಈ ಚಿತ್ರವು ತುಳುನಾಡಿನ ಸಂಸ್ಕೃತಿ, ದೈವ ಆರಾಧನೆ ಪರಂಪರೆ ಮತ್ತು ಸಮಕಾಲೀನ ಕಥೆಯನ್ನು ಒಂದೇ ಹಾದಿಯಲ್ಲಿ ಒಗ್ಗೂಡಿಸುತ್ತದೆ. ನವೀನ್ ಡಿ. ಪಡೀಲ್ ಅಭಿನಯಿಸಿರುವ ಬಾಳಣ್ಣ ಎಂಬ ಪಾತ್ರದ ಜೀವನಕ್ಕೆ ಮೊಬೈಲ್ ಫೋನ್ ಒಂದು ಬಂದ ನಂತರ ಸಂಭವಿಸುವ ಬದಲಾವಣೆಗಳೇ ಚಿತ್ರದ ಮುಖ್ಯ ಕಥಾವಸ್ತು.

ಸರಳವಾದ ಈ ಕಲ್ಪನೆಯ ಮೂಲಕ ತಂತ್ರಜ್ಞಾನವು ಜನರ ಜೀವನವನ್ನು ಹೇಗೆ ರೂಪಾಂತರಿಸುತ್ತದೆ ಎಂಬುದನ್ನು ಚಿತ್ರವು ತೋರಿಸುತ್ತದೆ. ಜೊತೆಗೆ ಪ್ರಕೃತಿಯೂ ಕಥೆಯ ಅವಿಭಾಜ್ಯ ಅಂಗವಾಗಿ ಮೂಡಿಬಂದಿದೆ.

“ಇಂಬು” ಚಿತ್ರವು ಈಗ ತುಳು ಸಿನಿಮಾಗೆ ರಾಷ್ಟ್ರೀಯ ಮಟ್ಟದ ಮಾನ್ಯತೆ ತಂದುಕೊಟ್ಟಿರುವುದು ನನಗೆ ತುಂಬಾ ಸಂತೋಷ ತಂದಿದೆ.