Skip to content
Billava News

ಹಾಡಿ ಮೂಲ ಗರಡಿ ನವೀಕರಣಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಕಾರದ ಭರವಸೆ

ಕಾರ್ಕಳ: ಹಿರ್ಗಾನ ಗ್ರಾಮದ ಮೂರುಾರು, ಕಾರ್ಕಳ ತಾಲೂಕಿನ ಹಾಡಿ ಮೂಲ ಗರಡಿ ಶ್ರೀ ಬ್ರಹ್ಮಬೈದರ್ಕಳ ಮಾಯಾಂದಲ ದೇವಿ ಸನ್ನಿಧಿಯ ನಾಲ್ಕು ಸುತ್ತಿನ ಸುತ್ತು ಪೌಳಿಯ ನವೀಕರಣ ಕಾಮಗಾರಿಗೆ ಸಹಕಾರ ಕೋರಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಭೇಟಿ ಮಾಡಲಾಯಿತು.

By Billavavani

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ನವೀಕರಣ ಕಾರ್ಯದ ಕುರಿತು ಸಂಸದರಿಗೆ ಮಾಹಿತಿ ನೀಡಿ, ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಹಕಾರ ನೀಡುವ ಭರವಸೆ ನೀಡಿದರು.

ಶ್ರೀ ಕ್ಷೇತ್ರ ಹಾಡಿ ಗರೋಡಿಯ ಅಧ್ಯಕ್ಷ ಸದಾನಂದ ಪೂಜಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.