Skip to content
Billava News

ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟ-2026: ಹೈಜಂಪ್ ಸ್ಪರ್ಧೆಯಲ್ಲಿ ನೈಮಿಷಾ ಪೂಜಾರಿ ದ್ವಿತೀಯ ಸ್ಥಾನ

ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟ-2026ರಲ್ಲಿ ಬಿಲ್ಲವ ಸಮುದಾಯದ ಪ್ರತಿಭಾನ್ವಿತ ಕ್ರೀಡಾಪಟು ನೈಮಿಷಾ ಪೂಜಾರಿ ಹೈಜಂಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

By Billavavani
ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟ-2026: ಹೈಜಂಪ್ ಸ್ಪರ್ಧೆಯಲ್ಲಿ ನೈಮಿಷಾ ಪೂಜಾರಿ ದ್ವಿತೀಯ ಸ್ಥಾನ

ಬೆಂಗಳೂರು: ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟ-2026ರಲ್ಲಿ ಬಿಲ್ಲವ ಸಮುದಾಯದ ಪ್ರತಿಭಾನ್ವಿತ ಕ್ರೀಡಾಪಟು ನೈಮಿಷಾ ಪೂಜಾರಿ ಹೈಜಂಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಬೆಂಗಳೂರು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ನೈಮಿಷಾ ಪೂಜಾರಿ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ರನ್ನರ್-ಅಪ್ ಸ್ಥಾನವನ್ನು ಗಳಿಸಿ ಜಿಲ್ಲೆಯ ಹಾಗೂ ಬಿಲ್ಲವ ಸಮುದಾಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ದೇವಳಗುಜ್ಜಿ, ದೆಂದೂರ್ಕಟ್ಟೆ ನಿವಾಸಿಯಾಗಿರುವ ಸದಾನಂದ ಪೂಜಾರಿ ಹಾಗೂ ರಮಣಿ ದಂಪತಿಯ ಪುತ್ರಿ ನೈಮಿಷಾ ಪೂಜಾರಿ ಅವರು ಪ್ರಸ್ತುತ ಬಿ.ಎ. ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ತೋರಿಸುತ್ತಿದ್ದಾರೆ.

ಜಂಪರ್ಸ್ ಅಕಾಡೆಮಿಯ ಕ್ರೀಡಾಪಟುವಾಗಿರುವ ನೈಮಿಷಾ ಅವರಿಗೆ ತರಬೇತುದಾರ ವಸಂತ ಜೋಗಿ ಅವರ ಮಾರ್ಗದರ್ಶನ ದೊರೆಯುತ್ತಿದ್ದು, ಅವರ ನಿರಂತರ ಪರಿಶ್ರಮ ಮತ್ತು ತರಬೇತಿಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.

ನೈಮಿಷಾ ಅವರ ಈ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು, ಕ್ರೀಡಾಭಿಮಾನಿಗಳು ಹಾಗೂ ಬಿಲ್ಲವ ಸಮುದಾಯದ ಮುಖಂಡರು ಅಭಿನಂದನೆ ಸಲ್ಲಿಸಿ, ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.