13 ವರ್ಷಗಳ ಸಮಾಜಸೇವೆಯ ಬಳಿಕ ಅಧಿಕೃತವಾಗಿ ನೋಂದಾಯಿತ ‘ನಮ್ಮ ಬಿಲ್ಲವೆರ್ (ರಿ)’ ತಂಡ
ಮಂಗಳೂರು: ಬಿಲ್ಲವ ಸಮಾಜದ ಸೇವೆ, ಸಂಘಟನೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಕಳೆದ 13 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ‘ನಮ್ಮ ಬಿಲ್ಲವೆರ್’ ತಂಡ ಇದೀಗ ಅಧಿಕೃತವಾಗಿ

ಮಂಗಳೂರು: ಬಿಲ್ಲವ ಸಮಾಜದ ಸೇವೆ, ಸಂಘಟನೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಕಳೆದ 13 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ‘ನಮ್ಮ ಬಿಲ್ಲವೆರ್’ ತಂಡ ಇದೀಗ ಅಧಿಕೃತವಾಗಿ ನೋಂದಾಯಿತ ತಂಡವಾಗಿ ಗುರುತಿಸಿಕೊಂಡಿದೆ.
ಕಳೆದ 13 ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ತಂಡವು, ಮುಂದಿನ ದಿನಗಳಲ್ಲಿಯೂ ಸಮಾಜದ ಅಭಿವೃದ್ಧಿ ಹಾಗೂ ಸಂಘಟನಾತ್ಮಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶ ಹೊಂದಿದೆ.
ಇನ್ನು ಮುಂದೆ ತಂಡವು ಅಧಿಕೃತವಾಗಿ ‘ನಮ್ಮ ಬಿಲ್ಲವೆರ್ (ರಿ)’ ಎಂಬ ಹೆಸರಿನಲ್ಲಿ ತನ್ನ ಸಮಾಜಮುಖಿ ಚಟುವಟಿಕೆಗಳನ್ನು ಮುಂದುವರಿಸಲಿದೆ.
“13 ವರ್ಷಗಳ ಸುದೀರ್ಘ ಸೇವಾ ಪಯಣದಲ್ಲಿ ನಮ್ಮೊಂದಿಗೆ ನಿಂತು ಬೆಂಬಲ, ಪ್ರೋತ್ಸಾಹ ನೀಡಿದ ಎಲ್ಲ ಸಮಾಜಬಾಂಧವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಬೆಂಬಲ ಹಾಗೂ ಸಹಕಾರ ನಮ್ಮ ಮೇಲಿರಲಿ ಎಂದು ಕೋರುತ್ತೇವೆ,” ಎಂದು ‘ನಮ್ಮ ಬಿಲ್ಲವೆರ್ (ರಿ)’ ತಂಡದ ಮುಖ್ಯಸ್ಥರಾದ ಚೇತನ್ ತಿಳಿಸಿದ್ದಾರೆ.
ಸಮಾಜದ ಏಳಿಗೆ ಹಾಗೂ ಒಗ್ಗಟ್ಟಿಗಾಗಿ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುವ ಸಂಕಲ್ಪವನ್ನು ತಂಡ ವ್ಯಕ್ತಪಡಿಸಿದೆ.
ಧನ್ಯವಾದಗಳೊಂದಿಗೆ,
ಟೀಂ ನಮ್ಮ ಬಿಲ್ಲವೆರ್ (ರಿ)
