‘ನಮ್ಮ ಕುಡ್ಲ’ ವಾಹಿನಿಯ ಮುಖ್ಯಸ್ಥರಾದ ಲೀಲಾಕ್ಷ ಕರ್ಕೇರ ಅವರಿಗೆ ‘ಕಂಬಳ ಅಕಾಡೆಮಿ ಪ್ರಶಸ್ತಿ’
ಮಂಗಳೂರು: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕಂಬಳ ಅಕಾಡೆಮಿ ಪ್ರಶಸ್ತಿ’ಗೆ ‘ನಮ್ಮ ಕುಡ್ಲ’ ವಾಹಿನಿಯ ಮುಖ್ಯಸ್ಥರಾದ ಲೀಲಾಕ್ಷ ಬಿ. ಕರ್ಕೇರ ಅವರು ಆಯ್ಕೆಯಾಗಿದ್ದಾರೆ.
By Billavavani

ಮಂಗಳೂರು: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕಂಬಳ ಅಕಾಡೆಮಿ ಪ್ರಶಸ್ತಿ’ಗೆ ‘ನಮ್ಮ ಕುಡ್ಲ’ ವಾಹಿನಿಯ ಮುಖ್ಯಸ್ಥರಾದ ಲೀಲಾಕ್ಷ ಬಿ. ಕರ್ಕೇರ ಅವರು ಆಯ್ಕೆಯಾಗಿದ್ದಾರೆ.
ಗುರುವಾರ ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಂಬಳ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಾ ಬಂದಿರುವ ಲೀಲಾಕ್ಷ ಕರ್ಕೇರ ಅವರು ಕಂಬಳ ಮಾಲಕರು ಹಾಗೂ ಓಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಶಸ್ತಿ ಹಾಗೂ ಗೌರವಗಳನ್ನು ನೀಡುತ್ತಾ ಬಂದಿದ್ದಾರೆ. ಕಂಬಳ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.