ಯುವವಾಹಿನಿ (ರಿ) ಕೊಲ್ಯ ಘಟಕ: ಅಭಯ ಆಶ್ರಯದಲ್ಲಿ ಹಿರಿಯರೊಂದಿಗೆ ನಾರಾಯಣ ಗುರು ಜಯಂತಿ ಆಚರಣೆ
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಮಾನವತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಯುವವಾಹಿನಿ (ರಿ) ಕೊಲ್ಯ ಘಟಕ ಹಾಗೂ ಗ್ರಾಮಚಾವಡಿ ಕೊಣಾಜೆ ಘಟಕದ ವತಿಯಿಂದ ಅಭಯ ಆಶ್ರಯ, ಅಸೈಗೊಳಿಯಲ್ಲಿ ಹಿರಿಯರೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಕೊಣಾಜೆ/ಅಸೈಗೊಳಿ, ಆ. 29: ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಮಾನವತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಯುವವಾಹಿನಿ (ರಿ) ಕೊಲ್ಯ ಘಟಕ ಹಾಗೂ ಗ್ರಾಮಚಾವಡಿ ಕೊಣಾಜೆ ಘಟಕದ ವತಿಯಿಂದ ಅಭಯ ಆಶ್ರಯ, ಅಸೈಗೊಳಿಯಲ್ಲಿ ಹಿರಿಯರೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ವಿಶ್ವ ಬಿಲ್ಲವರ ಸೇವಾ ಚಾವಡಿಯ ಸಹಕಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಅಭಯ ಆಶ್ರಯದ ಹಿರಿಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ವಿಶ್ವ ಬಿಲ್ಲವರ ಸೇವಾ ಚಾವಡಿ ಸದಸ್ಯರು ಹಾಗೂ ಗ್ರಾಮಚಾವಡಿ ಘಟಕದ ಪ್ರಥಮ ಉಪಾಧ್ಯಕ್ಷ ಅಜಿತ್ ಪಜೀರ್ ಉಪಸ್ಥಿತರಿದ್ದವರನ್ನು ಸ್ವಾಗತಿಸಿದರು.

ಯುವವಾಹಿನಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಶಶಿಕಾಂತ್ ಪರ್ಯತ್ತೂರು ಅವರು ನಾರಾಯಣ ಗುರುಗಳ ಜನನ, ಜೀವನ ಹಾಗೂ ಸಮಾಜದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳ ಕುರಿತು ವಿವರಿಸಿ ಗುರು ಸಂದೇಶ ನೀಡಿದರು. ಗ್ರಾಮಚಾವಡಿ ಕೊಣಾಜೆ ಘಟಕದ ಅಧ್ಯಕ್ಷ ಮುರಳೀಧರ ಕೊಣಾಜೆ ಅವರು ಗುರುವಿನ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು.

ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಅವರು ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಚಾವಡಿ ಸದಸ್ಯೆ ಸುಜಾತ ಹರೇಕಳ ಪ್ರಾರ್ಥನೆ ಹಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮಚಾವಡಿ ಘಟಕದ ಹಿರಿಯ ಸಲಹೆಗಾರ ರವೀಂದ್ರ ಬಂಗೇರ, ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಹಾಗೂ ಕೊಲ್ಯ ಘಟಕದ ಮಾಜಿ ಅಧ್ಯಕ್ಷೆ ಸುಧಾ ಸುರೇಶ್, ಕೇಂದ್ರ ಸಮಿತಿಯ ಯುವಸಿಂಚನ ಸಂಪಾದಕ ಮಂಡಳಿ ಸದಸ್ಯ ಹಾಗೂ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಲತೀಶ್ ಸಂಕೋಲಿಗೆ, ವಿವಿಧ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
