Skip to content
Tulunadu Special

ಹಾಡಿ ಮೂಲ ಗರಡಿಯಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಉತ್ಸವ

ಹಾಡಿ ಮೂಲ ಗರಡಿ: ಇಲ್ಲಿನ ಶ್ರೀ ಕ್ಷೇತ್ರ ಹಾಡಿ ಮೂಲ ಗರಡಿಯಲ್ಲಿ ದಿನಾಂಕ 11/10/2026ರಿಂದ 20/10/2026ರವರೆಗೆ ನವರಾತ್ರಿ ಉತ್ಸವವು ಭಕ್ತಿಭಾವದಿಂದ ನಡೆಯಲಿದೆ.

By Billavavani
ಹಾಡಿ ಮೂಲ ಗರಡಿಯಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಉತ್ಸವ

ಹಾಡಿ ಮೂಲ ಗರಡಿ: ಇಲ್ಲಿನ ಶ್ರೀ ಕ್ಷೇತ್ರ ಹಾಡಿ ಮೂಲ ಗರಡಿಯಲ್ಲಿ ದಿನಾಂಕ 11/10/2026ರಿಂದ 20/10/2026ರವರೆಗೆ ನವರಾತ್ರಿ ಉತ್ಸವವು ಭಕ್ತಿಭಾವದಿಂದ ನಡೆಯಲಿದೆ.

ಉತ್ಸವದ ಅಂಗವಾಗಿ ಅಕ್ಟೋಬರ್ 11ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ತೋರಣ ಮುಹೂರ್ತ ಹಾಗೂ ಕಲಶ ಪ್ರತಿಷ್ಠೆ ನೆರವೇರಲಿದೆ. ಬಳಿಕ ಶ್ರೀ ಕ್ಷೇತ್ರ ಗರಡಿಯ ವತಿಯಿಂದ ಪ್ರತಿಷ್ಠಾ ಪೂಜೆ ನಡೆಯಲಿದ್ದು, ಮಧ್ಯಾಹ್ನ ಶ್ರೀ ಕ್ಷೇತ್ರ ಕಾನಂಗಿಯ ವತಿಯಿಂದ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.

ನವರಾತ್ರಿ ಉತ್ಸವದ ಪ್ರಯುಕ್ತ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ತಿಳಿಸಿದ್ದಾರೆ.