ಪಡುಬೆಳ್ಳೆ ಶ್ರೀ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಶಾಲೆಗೆ ಟಾಟಾ ಟ್ರಸ್ಟ್ ವತಿಯಿಂದ ನೂತನ ಶಾಲಾ ಬಸ್
ಬಿಲ್ಲವರ ಅಸೋಸಿಯೇಷನ್ ಮುಂಬೈ ಪ್ರಾಯೋಜಿತ ಶ್ರೀ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಶಾಲೆಯ ಮಕ್ಕಳ ಅನುಕೂಲ ಹಾಗೂ ಶಾಲೆಯ ಪ್ರಗತಿಗಾಗಿ ಟಾಟಾ ಟ್ರಸ್ಟ್ ವತಿಯಿಂದ ನೂತನ ಶಾಲಾ ಬಸ್‌ನ್ನು ಒದಗಿಸಲಾಗಿದೆ.

ಪಡುಬೆಳ್ಳೆ: ಬಿಲ್ಲವರ ಅಸೋಸಿಯೇಷನ್ ಮುಂಬೈ ಪ್ರಾಯೋಜಿತ ಶ್ರೀ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಶಾಲೆಯ ಮಕ್ಕಳ ಅನುಕೂಲ ಹಾಗೂ ಶಾಲೆಯ ಪ್ರಗತಿಗಾಗಿ ಟಾಟಾ ಟ್ರಸ್ಟ್ ವತಿಯಿಂದ ನೂತನ ಶಾಲಾ ಬಸ್‌ನ್ನು ಒದಗಿಸಲಾಗಿದೆ.
ಬಿಲ್ಲವರ ಅಸೋಸಿಯೇಷನ್ ಮುಂಬೈ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರ ನೇತೃತ್ವದ ಕಾರ್ಯಕಾರಿ ಸಮಿತಿಯ ಸತತ ಪ್ರಯತ್ನದ ಫಲವಾಗಿ, ಶಾಲೆಗೆ CSR ನಿಧಿಯ ಮೂಲಕ ಈ ವರ್ಷ ಒಟ್ಟು ಮೂರು ನೂತನ ಶಾಲಾ ಬಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ಸುರಕ್ಷಿತ ಹಾಗೂ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ನೆರವಾಗಲಿದೆ.
ಈ ಮಹತ್ವದ ಕಾರ್ಯಕ್ಕೆ ಸಹಕಾರ ನೀಡಿದ ಟಾಟಾ ಟ್ರಸ್ಟ್ ಸಂಸ್ಥೆಗೆ ಬಿಲ್ಲವರ ಅಸೋಸಿಯೇಷನ್ ಮುಂಬೈ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಲಾಯಿತು.
ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರ ಪ್ರೇರಣೆಯಿಂದ ಈ ಪುಣ್ಯ ಕಾರ್ಯದ ಯಶಸ್ಸಿಗಾಗಿ ಸತತವಾಗಿ ಶ್ರಮಿಸಿದ ಹಿರಿಯ ಕಮಿಟಿ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷರಾದ ಶಂಕರ್ ದೇಜು ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್, ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್ ಸೇರಿದಂತೆ ಎಲ್ಲರ ನಿರಂತರ ಪ್ರಯತ್ನವನ್ನು ಶ್ಲಾಘಿಸಲಾಗಿದೆ.
ಬಿಲ್ಲವರ ಅಸೋಸಿಯೇಷನ್ ಮುಂಬೈ ಸಮಾಜಮುಖಿ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹಲವು ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಸಂಘಟನೆಯ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ಸಮಾಜ ಬಾಂಧವರ ತುಂಬು ಹೃದಯದ ಸಹಕಾರ ಮುಂದೆಯೂ ನಿರಂತರವಾಗಿ ದೊರೆಯಲಿ ಎಂದು ಆಶಿಸಲಾಗಿದೆ.
