Skip to content
Billava News

ಯುವವಾಹಿನಿ (ರಿ.) ಸುಳ್ಯ ಘಟಕ: 2026-27ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ನೂತನ ಪ್ರವೀಣ್ ನೆಟ್ಟಾರು ಆಯ್ಕೆ

ಸುಳ್ಯ: ಯುವವಾಹಿನಿ (ರಿ.) ಸುಳ್ಯ ಘಟಕದ 2026-27ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ನೂತನ ಪ್ರವೀಣ್ ನೆಟ್ಟಾರು ಆಯ್ಕೆಯಾಗಿದ್ದಾರೆ.

By Billavavani
ಯುವವಾಹಿನಿ (ರಿ.) ಸುಳ್ಯ ಘಟಕ: 2026-27ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ನೂತನ ಪ್ರವೀಣ್ ನೆಟ್ಟಾರು ಆಯ್ಕೆ

ಸುಳ್ಯ: ಯುವವಾಹಿನಿ (ರಿ.) ಸುಳ್ಯ ಘಟಕದ 2026-27ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ನೂತನ ಪ್ರವೀಣ್ ನೆಟ್ಟಾರು ಆಯ್ಕೆಯಾಗಿದ್ದಾರೆ.

ಯುವವಾಹಿನಿ (ರಿ.) ಸುಳ್ಯ ಘಟಕದ ವಾರ್ಷಿಕ ಮಹಾಸಭೆಯು ಅಕ್ಟೋಬರ್ 11ರಂದು ಲೋಹಿತ್ ರೆಂಜಾಳ ಅವರ ಮನೆಯಲ್ಲಿ ಮಹೇಶ್ ಕಲ್ಪಣೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಘಟಕದ ಕಾರ್ಯದರ್ಶಿ ರಂಜಿತ್ ದರ್ಕಾಸ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಹರೀಶ್ ದೋಳ ಲೆಕ್ಕಪತ್ರಗಳ ವಿವರ ನೀಡಿದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಸಮಿತಿಯ ಶಿವಪ್ರಸಾದ್ ಕೆ.ವಿ. ನಡೆಸಿಕೊಟ್ಟರು.

2026-27ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಕಾರ್ಯದರ್ಶಿಯಾಗಿ ಹರೀಶ್ ದೋಳ, ಕೋಶಾಧಿಕಾರಿಯಾಗಿ ರಂಜಿತ್ ದರ್ಕಾಸ್, ಉಪಾಧ್ಯಕ್ಷರಾಗಿ ನವೀನ್ ರಾಮಕುಮೇರಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಲೋಕೇಶ್ ಆಯ್ಕೆಯಾದರು.

WhatsApp Image 2026-10-11 at 8.33.13 PM.jpeg

ನಿರ್ದೇಶಕರಾಗಿ ವ್ಯಕ್ತಿತ್ವ ವಿಕಸನ ವಿಭಾಗಕ್ಕೆ ಉಮೇಶ್ ಮಣಿಕ್ಕಾರ, ಕ್ರೀಡಾ ವಿಭಾಗಕ್ಕೆ ಅಶೋಕ್ ಸುವರ್ಣ ಐವರ್ನಾಡು, ಸಮಾಜ ಸೇವಾ ವಿಭಾಗಕ್ಕೆ ಶಶಿಕಲಾ ಎ. ನೀರಬಿದಿರೆ, ಆರೋಗ್ಯ ವಿಭಾಗಕ್ಕೆ ಪ್ರಕಾಶ್ ಪಾಲ್ತಾಡು, ಪ್ರಚಾರ ವಿಭಾಗಕ್ಕೆ ವಿಜೇತ್ ಪರಗುತ್ತು, ವಿದ್ಯಾನಿಧಿ ವಿಭಾಗಕ್ಕೆ ಸುಂದರ್ ಪೂಜಾರಿ ಸುಳ್ಯ, ಕಲೆ ಮತ್ತು ಸಾಂಸ್ಕೃತಿಕ ವಿಭಾಗಕ್ಕೆ ಪ್ರದೀಪ್ ನೆಟ್ಟಾರು, ವಿದ್ಯಾರ್ಥಿ ಸಂಘಟನಾ ವಿಭಾಗಕ್ಕೆ ಕು. ಶ್ರಾವ್ಯ ಬಿ.ಆರ್., ಮಹಿಳಾ ಸಂಘಟನಾ ವಿಭಾಗಕ್ಕೆ ಕುಸುಮ ರೆಂಜಾಳ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ವಿಭಾಗಕ್ಕೆ ರವಿಚಂದ್ರ ಸುವರ್ಣ ಹಾಗೂ ನಾರಾಯಣ ಗುರುತತ್ವ ಪ್ರಚಾರ ಮತ್ತು ಅನುಷ್ಠಾನ ವಿಭಾಗಕ್ಕೆ ರಮೇಶ್ ಜಯನಗರ ಆಯ್ಕೆಯಾದರು.

ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಾವತಿ ಎ.ಎಸ್., ಬಾಲಕೃಷ್ಣ ತಡಗಜೆ, ಪ್ರಭಾಕರ ಕುತ್ಯಾಡಿ, ಲವಿನ್ ಸುಳ್ಯ ಹಾಗೂ ಚಂದ್ರಾವತಿ ಕಲ್ಪಣೆ ಆಯ್ಕೆಯಾದರು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ನಿಯೋಜಿತ ಅಧ್ಯಕ್ಷೆ ನೂತನ ಪ್ರವೀಣ್ ನೆಟ್ಟಾರು ಮಾತನಾಡಿ, ಘಟಕದ ಮುಂದಿನ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಮಹೇಶ್ ಕಲ್ಪಣೆ ಅವರು ಮುಂಬರುವ ಕುದ್ರೋಳಿ ಕ್ಷೇತ್ರದ ನವರಾತ್ರಿ ಉತ್ಸವದಲ್ಲಿ ಯುವವಾಹಿನಿ ಸದಸ್ಯರು ಸ್ವಯಂಸೇವಕರಾಗಿ ಭಾಗವಹಿಸುವ ಕುರಿತು ಮಾಹಿತಿ ನೀಡಿದರು.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನವೆಂಬರ್ 22ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಯುವವಾಹಿನಿ (ರಿ.) ಸುಳ್ಯ ಘಟಕದ ಸ್ಥಾಪಕ ಅಧ್ಯಕ್ಷ ಶಿವಪ್ರಸಾದ್ ಕೆ.ವಿ., ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣ ಗುರುತತ್ವ ಪ್ರಚಾರ ನಿರ್ದೇಶಕ ಲೋಹಿತ್ ರೆಂಜಾಳ ಹಾಗೂ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಅಂಗಣ ಉಪಸ್ಥಿತರಿದ್ದರು.