ಅಯೋಧ್ಯೆಯಲ್ಲಿ ಕನ್ಯಾಡಿ ಶ್ರೀರಾಮ ಮಠ ನಿರ್ಮಾಣಕ್ಕೆ ಒಮಾನ್ ಬಿಲ್ಲವಾಸ್ ಭಕ್ತರಿಂದ ₹10 ಲಕ್ಷಕ್ಕೂ ಅಧಿಕ ದೇಣಿಗೆ
ಮಸ್ಕತ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ದೇಶಿತ ಕನ್ಯಾಡಿ ಶ್ರೀರಾಮ ಮಠದ ನಿರ್ಮಾಣ ಯೋಜನೆಗೆ ಮಸ್ಕತ್ನ ಶ್ರೀರಾಮ ಭಕ್ತರು ಒಗ್ಗೂಡಿ ₹10 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹಿಸಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಪರಮಪೂಜ್ಯ ಶ್ರೀ ಮಂಡಲೇಶ್ವರ ಬ್ರಹ್ಮಾನಂದ ಸ್ವಾಮೀಜಿ ಮಹಾರಾಜರಿಗೆ ಹಸ್ತಾಂತರಿಸಿದರು.

ಮಸ್ಕತ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ದೇಶಿತ ಕನ್ಯಾಡಿ ಶ್ರೀರಾಮ ಮಠದ ನಿರ್ಮಾಣ ಯೋಜನೆಗೆ ಮಸ್ಕತ್ನ ಶ್ರೀರಾಮ ಭಕ್ತರು ಒಗ್ಗೂಡಿ ₹10 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹಿಸಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಪರಮಪೂಜ್ಯ ಶ್ರೀ ಮಂಡಲೇಶ್ವರ ಬ್ರಹ್ಮಾನಂದ ಸ್ವಾಮೀಜಿ ಮಹಾರಾಜರಿಗೆ ಹಸ್ತಾಂತರಿಸಿದರು.
ಒಮಾನ್ ಬಿಲ್ಲವಾಸ್ನ ಮಾಜಿ ಅಧ್ಯಕ್ಷರು ಹಾಗೂ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗಲ್ಫ್ ರಾಷ್ಟ್ರಗಳ ಉಪಾಧ್ಯಕ್ಷರಾದ ಶ್ರೀ ಸುಜಿತ್ ಅಂಚನ್ ಪಾಂಗಾಳ ಅವರ ನೇತೃತ್ವದಲ್ಲಿ ಈ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮ ಮಠ ನಿರ್ಮಾಣದ ಪುಣ್ಯ ಕಾರ್ಯಕ್ಕೆ ಕೈಜೋಡಿಸುವ ಉದ್ದೇಶದಿಂದ ಭಕ್ತರು ಈ ಮೊತ್ತವನ್ನು ಸಂಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ. ಎನ್. ಶಂಕರ್ ಪೂಜಾರಿ, ಶ್ರೀ ರಾಮ ಪೂಜಾರಿ ಕಲ್ಯಾಣಪುರ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಉಡುಪಿ ಜಿಲ್ಲಾ ಬಿಲ್ಲವ ಮಹಾಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಬಿಜೆಪಿ ಪ್ರಭಾರಿ ಜಯಂತ್ ಕೋಟ್ಯಾನ್, ಮೂಡುಬಿದಿರೆ ಮಂಡಲ ಬಿಜೆಪಿ ಕಾರ್ಯದರ್ಶಿ ರಂಜೀತ್ ಪೂಜಾರಿ ತೋಡಾರ್, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್, ಯುವ ಉದ್ಯಮಿ ಕೆ. ಕಾಮರಾಜ್ ಸುವರ್ಣ, ಬಿರುವೆರ್ ಕಾಪು ಸಮಿತಿಯ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೋಟಿಯನ್, ಮಜೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಪೂಜಾರಿ, ರಾಮ ಪೂಜಾರಿ, ರಿತೇಶ್ ಕೋಟ್ಯಾನ್, ಶುಭ ರಾಜೇಂದ್ರ ಚಿಲಿಂಬಿ, ಸುರೇಂದ್ರ ಅಂಚನ್, ಉಮೇಶ್ ಬಂಗೇರ ಹಾಗೂ ದೀಪಕ್ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ಆತ್ಮೀಯವಾಗಿ ಸ್ವಾಗತಿಸಿದ ಪರಮಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ಎಲ್ಲರಿಗೂ ಆಶೀರ್ವಚನ ನೀಡಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಠ ನಿರ್ಮಾಣಕ್ಕೆ ಭಕ್ತರು ನೀಡಿದ ಈ ಕೊಡುಗೆ ಧಾರ್ಮಿಕ ಶ್ರದ್ಧೆ, ಸೇವಾಭಾವ ಮತ್ತು ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
