Skip to content
Billava News

ಗುರುದೇವ ಸಹಕಾರ ಸಂಘಕ್ಕೆ ಒಮಾನ್ ಬಿಲ್ಲವಾಸ್ ತಂಡದ ಭೇಟಿ

ಬೆಳ್ತಂಗಡಿ: ಒಮಾನ್ ಬಿಲ್ಲವಾಸ್‌ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸುಜಿತ್ ಅಂಚನ್ ಹಾಗೂ ಅವರ ತಂಡವು ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.), ಬೆಳ್ತಂಗಡಿಗೆ ಭೇಟಿ ನೀಡಿತು.

By Billavavani
ಗುರುದೇವ ಸಹಕಾರ ಸಂಘಕ್ಕೆ ಒಮಾನ್ ಬಿಲ್ಲವಾಸ್ ತಂಡದ ಭೇಟಿ

ಬೆಳ್ತಂಗಡಿ: ಒಮಾನ್ ಬಿಲ್ಲವಾಸ್‌ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸುಜಿತ್ ಅಂಚನ್ ಹಾಗೂ ಅವರ ತಂಡವು ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.), ಬೆಳ್ತಂಗಡಿಗೆ ಭೇಟಿ ನೀಡಿತು.

1001212218.jpg

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಮಂಡಳಿಯ ಸದಸ್ಯರು ವಿಡಿಯೋ ಪ್ರಸ್ತುತಿಯ ಮೂಲಕ ಸಂಸ್ಥೆಯ ಉದ್ದೇಶಗಳು, ಕಾರ್ಯವೈಖರಿ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ಶ್ರೀ ಸುಜಿತ್ ಅಂಚನ್ ಅವರು, “ಗುರುದೇವ ಬ್ಯಾಂಕ್ ನಮ್ಮ ಸಮಾಜದ ಹೆಮ್ಮೆ. ಸಮಾಜದ ಆರ್ಥಿಕ ಅಭಿವೃದ್ಧಿ ಹಾಗೂ ಜನರ ಪ್ರಗತಿಗೆ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಬಿಲ್ಲವ ಸಮಾಜದ ಯುವ ನಾಯಕ ಶ್ರೀ ರಕ್ಷಿತ್ ಶಿವರಾಮ್ ಅವರೊಂದಿಗೆ ಸಮಾಜದ ಪ್ರಸ್ತುತ ಸ್ಥಿತಿಗತಿ, ಯುವಜನರ ಪಾತ್ರ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಯ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು.

ಭೇಟಿಯ ಸ್ಮರಣಾರ್ಥ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶ್ರೀ ಸುಜಿತ್ ಅಂಚನ್ ದಂಪತಿಯನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಭಗೀರಥ ಜಿ., ಉಪಾಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ., ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಮಹೇಶ್ ಅಂಚನ್, ಕೃಪಾ ಸುಜಿತ್ ಅಂಚನ್, ಗೀತಾಂಜಲಿ ಸುವರ್ಣ, ಶುಭಾ ರಾಜೇಂದ್ರ, ದೀಪಕ್ ರಾಜ್ ಹಾಗೂ ರಾಮ ಪೂಜಾರಿ ಉಪಸ್ಥಿತರಿದ್ದರು.